alex Certify ರಸ್ತೆ ಮಧ್ಯದಲ್ಲಿ ಬಿದ್ದಿದ್ದ ಬೈಕ್ ಸವಾರ…! ಸಿಸಿ ಟಿವಿ ನೋಡಿದ ಪೊಲೀಸರಿಗೆ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮಧ್ಯದಲ್ಲಿ ಬಿದ್ದಿದ್ದ ಬೈಕ್ ಸವಾರ…! ಸಿಸಿ ಟಿವಿ ನೋಡಿದ ಪೊಲೀಸರಿಗೆ ಶಾಕ್

ಈ ಪ್ರಪಂಚದಲ್ಲಿ ಎಂತೆಂಥಾ ಜನ ಇರುತ್ತಾರೆಂದರೆ ಆಶ್ಚರ್ಯವಾಗುತ್ತದೆ. ವ್ಹೀಲಿಂಗ್ ಮಾಡಬೇಡಿ ಅಂದ್ರೂ ಅದೆಷ್ಟೋ ಜನ ಯುವಕರು ವ್ಹೀಲಿಂಗ್ ಮಾಡಿ ತಮ್ಮ ಜೀವ ಮಾತ್ರವಲ್ಲದೆ ಬೇರೆಯವರ ಜೀವದಲ್ಲೂ ಚೆಲ್ಲಾಟವಾಡುವವರಿದ್ದಾರೆ. ಅಂಥದ್ರಲ್ಲಿ ಇಲ್ಲೊಬ್ಬ ಯುವಕ ಸುಮ್ ಸುಮ್ಮನೆ ಬೈಕ್ ಅಪಘಾತವಾಗಿದೆಯೆಂದು ನಂಬಿಸಿ, ಪೊಲೀಸರಿಗೆ ಶಾಕ್ ಕೊಟ್ಟಿದ್ದಾನೆ.

ರಸ್ತೆಗಳಲ್ಲಿ ಇನ್ಮುಂದೆ ಕೇಳಲಿದೆ ತಬಲಾ, ವೀಣೆ, ಕೊಳಲಿನ ಸದ್ದು : ಹೊಸ ಯೋಜನೆ ಬಗ್ಗೆ ಸುಳಿವು ನೀಡಿದ ಗಡ್ಕರಿ..!

ಹೌದು, ಬೈಕ್ ಸವಾರನೊಬ್ಬ ಸುಖಾಸುಮ್ಮನೆ ಅಪಘಾತವಾಗಿದೆಯೆಂದು ನಂಬಿಸಿದ್ದಾನೆ. ಮಧ್ಯರಾತ್ರಿ ವೇಳೆಗೆ ಮ್ಯಾನ್ಸ್‌ಫೀಲ್ಡ್‌ನ ಅವೆನ್ಯೂದ ರಸ್ತೆ ಮಧ್ಯದಲ್ಲಿ ಸವಾರ ಬೈಕ್ ನೊಂದಿಗೆ ಬಿದ್ದಿರುವುದು ಪತ್ತೆಯಾಗಿದೆ. ವಾಹನ ಚಾಲಕನೊಬ್ಬ ಬಂದು ನೋಡಿದಾಗ ಬೈಕ್ ಸವಾರ ಪ್ರಜ್ಞೆ ತಪ್ಪಿದವರಂತೆ ಬಿದ್ದಿದ್ದ.

ತೊಂದರೆ ನೀಡಿದ ಕ್ಯಾಬ್ ಚಾಲಕನ ವಿರುದ್ಧ ನಟಿ ಸಂಜನಾ ಗರಂ, ದೂರು ನೀಡಿದ ಡ್ರೈವರ್

ಕೂಡಲೇ ನಾಟಿಂಗ್ಹ್ಯಾಮ್‌ಶೈರ್‌ನಲ್ಲಿ ರಸ್ತೆಯನ್ನು ಮುಚ್ಚಲಾಯಿತು. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಯೂ ತನ್ನ ನವರಂಗಿ ನಾಟಕವನ್ನು ಮುಂದುವರಿಸಿದ್ದಾನೆ. ಸಿಸಿ ಟಿವಿ ಪರಿಶೀಲಿಸಿದ ಪೊಲೀಸರಿಗೆ ಯುವಕನ ಅಸಲಿಯಾಟ ಬಯಲಾಗಿದೆ.

ಕೊನೆಗೆ ತನ್ನ ಅಪಘಾತವನ್ನು ಸುಳ್ಳು ಎಂದು ಒಪ್ಪಿಕೊಂಡಿದ್ದಾನೆ. ಹೀಗಾಗಿ ನಾಟಿಂಗ್‌ಹ್ಯಾಮ್‌ಶೈರ್ ಪೊಲೀಸರು ಆತನಿಗೆ ಪೆನಾಲ್ಟಿ ನೋಟಿಸ್ ನೀಡಿದ್ದಾರೆ. ನಂತರ, ಇತರರು ಇಂತಹ ಸ್ಟಂಟ್‌ಗಳನ್ನು ಮಾಡದಂತೆ ತಡೆಯಲು ಪೊಲೀಸ್ ಇಲಾಖೆಯು ಆನ್‌ಲೈನ್‌ನಲ್ಲಿ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...