alex Certify ಎದೆ ನಡುಗಿಸುವಂತಿದೆ ಹೊತ್ತಿ ಉರಿಯುತ್ತಿರುವ ಅಪಾರ್ಟ್ಮೆಂಟ್‌ನಿಂದ ಪೈಪ್ ಹಿಡಿದು ಕೆಳಗಿಳಿದವರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುವಂತಿದೆ ಹೊತ್ತಿ ಉರಿಯುತ್ತಿರುವ ಅಪಾರ್ಟ್ಮೆಂಟ್‌ನಿಂದ ಪೈಪ್ ಹಿಡಿದು ಕೆಳಗಿಳಿದವರ ವಿಡಿಯೋ

ದಾರಿಹೋಕರೊಬ್ಬರು ಸೆರೆ ಹಿಡಿದ ಶಾಕಿಂಗ್ ವಿಡಿಯೋವೊಂದರಲ್ಲಿ ಹೊತ್ತಿ ಉರಿಯುತ್ತಿರುವ 14 ಅಂತಸ್ತಿನ ಅಪಾರ್ಟ್ಮೆಂಟ್‌‌ನಿಂದ ಪೈಪ್‌ಗಳನ್ನು ಹಿಡಿದು ಕೆಳಗೆ ಜಾರಿಕೊಂಡು ಬರುತ್ತಿರುವ ಟೀನೇಜರ್‌ಗಳನ್ನು ನೋಡಬಹುದಾಗಿದೆ.

ಜಸ್ಟಿನ್ ಮಾಲ್ಪಿಕಾ ಎಂಬಾತ ಶೇರ್‌ ಮಾಡಿದ ಈ ವಿಡಿಯೋದಲ್ಲಿ, 18 ವರ್ಷದ ಹುಡುಗಿ ಮತ್ತು ಆಕೆಯ 13 ವರ್ಷದ ತಮ್ಮ ಹೊಗೆ ತುಂಬಿಕೊಂಡಿದ್ದ ಕಿಟಕಿಯಿಂದ ಆಚೆ ಬರಲು ಯತ್ನಿಸುತ್ತಿರುವುದನ್ನು ನೋಡಬಹುದು.

BREAKING: ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಮೃತದೇಹ ಪತ್ತೆ

ನ್ಯೂಯಾರ್ಕ್‌ನ ಈಸ್ಟ್‌ ವಿಲೇಜ್ ಪ್ರದೇಶದಲ್ಲಿ ಈ ಘಟನೆ ಜರುಗಿದೆ. ತುರ್ತು ಕರೆ ಸ್ವೀಕರಿಸಿದ ನಾಲ್ಕೇ ನಿಮಿಷಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ, ಅಷ್ಟರಲ್ಲಾಗಲೇ ಇವರಿಬ್ಬರೂ ಕಟ್ಟಡವನ್ನು ಇಳಿದುಬಿಟ್ಟಿದ್ದರು.

ಬರೀ 25-39 ಸೆಕೆಂಡ್‌ಗಳಲ್ಲಿ ಕಟ್ಟಡವನ್ನಿಳಿದ ಈ ಒಡಹುಟ್ಟಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ಅವಘಡದಲ್ಲಿ ಸುಟ್ಟ ಗಾಯಗಳನ್ನು ಮಾಡಿಕೊಂಡ ಅವರ ತಾಯಿಯ ಪರಿಸ್ಥಿತಿ ಗಂಭೀರವಾಗಿದೆ. ಘಟನೆಗೆ ಕಾರಣವೇನೆಂದು ಇನ್ನಷ್ಟೇ ತಿಳಿಯಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...