alex Certify ಉದ್ಯೋಗ ಕಳೆದುಕೊಳ್ಳುವ ಸೂಚನೆ ನೀಡಬಹುದು ಈ ಅಂಶ; ಈ ಬಗ್ಗೆ ಇರಲಿ ಗಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ಕಳೆದುಕೊಳ್ಳುವ ಸೂಚನೆ ನೀಡಬಹುದು ಈ ಅಂಶ; ಈ ಬಗ್ಗೆ ಇರಲಿ ಗಮನ

ಕಳೆದ ಕೆಲ ವರ್ಷಗಳಿಂದ ಉದ್ಯೋಗಿಗಳನ್ನು ವಜಾಗೊಳಿಸುವುದು ಮಾಮೂಲಾಗಿದೆ. ಕನಸಿನ ಉದ್ಯೋಗಗಳಿಂದ ಏಕಾಏಕಿ ವಜಾಗೊಂಡಾಗ ಆಗುವ ಸಂಕಟ ಅಷ್ಟಿಷ್ಟಲ್ಲ. ‌

ವೃತ್ತಿನಿರತರನ್ನು ಎರಡು ದಿನಗಳ ಕಾಲ ಕೆಲಸಕ್ಕಾಗಿ ವಿದೇಶಕ್ಕೆ ಕಳುಹಿಸಿ ನಂತರ ವಜಾಗೊಳಿಸುವುದು, ಇಲ್ಲವೇ ಹೆರಿಗೆ ರಜೆಯಲ್ಲಿರುವ ಮಹಿಳೆಯರನ್ನು ವಾಪಸ್​ ಕರೆಸಿಕೊಳ್ಳದೇ ಇರುವುದು ಇತ್ಯಾದಿಗಳು ನಡೆಯುತ್ತಿವೆ.

ಇಲ್ಲಿಯವರೆಗೆ ಟೆಕ್ ವಲಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ವಜಾಗೊಳಿಸಲಾಗಿದೆ, Oyo, Byjus ಮತ್ತು HealthifyMe ನಂತಹ ಹೊಸ ಯುಗದ ಡಿಜಿಟಲ್ ಸ್ಟಾರ್ಟ್‌ಅಪ್‌ಗಳು ಸಹ ಉದ್ಯೋಗಿಗಳನ್ನು ವಜಾ ಮಾಡಲು ಪ್ರಾರಂಭಿಸಿವೆ, ಇದು ಭಾರತದಲ್ಲೂ ವಜಾಗೊಳಿಸುವ ಅಲೆಯ ಆಗಮನವನ್ನು ಸೂಚಿಸುತ್ತದೆ.

ಏಕಾಏಕಿ ವಜಾಗೊಳಿಸಿ ದಿಗ್ಭ್ರಮೆಗೆ ಒಳಗಾಗುವ ಬದಲು ವಜಾಗೊಳಿಸುವಿಕೆಯ ಕುರಿತು ಕೆಲವೊಮ್ಮೆ ಉದ್ಯೋಗಿಗಳ ಊಹಿಸಿಕೊಳ್ಳಲು ಸಾಧ್ಯವಿದೆ. ಕಂಪೆನಿಗಳ ಕಾರ್ಯಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಇದು ಸಾಧ್ಯ ಎನ್ನಲಾಗಿದೆ. ಅವುಗಳ ಕೆಲವು ಮಾಹಿತಿ ಇಲ್ಲಿ ನೀಡಲಾಗಿದೆ.

ಉನ್ನತ ಅಧಿಕಾರಿಗಳ ನಿರ್ಗಮನ

ಉನ್ನತ ಅಧಿಕಾರಿಗಳು ಕಂಪೆನಿಯಿಂದ ನಿರ್ಗಮಿಸುತ್ತಿದ್ದರೆ ಅಥವಾ ಸಂಸ್ಥೆಯಲ್ಲಿ ಕೆಲವೊಂದು ಪುನರ್​ರಚನೆ ಅಗುತ್ತಿದ್ದರೆ, ಇದು ವೆಚ್ಚವನ್ನು ಕಡಿಮೆ ಮಾಡುವ ಮುನ್ಸೂಚನೆ. ಇದರಿಂದ ಉದ್ಯೋಗ ಕಡಿತವಾಗಬಹುದು ಎಂದು ಊಹಿಸಬಹುದು. ನೀವು ತಂಡದ ಭಾಗವಾಗಿರಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲು ಇದು ಸುಸಮಯವಾಗಿದೆ.

ಬಾಹ್ಯ ಶಕ್ತಿಗಳ ಗೋಚರ

ಹಿರಿಯ ವ್ಯವಸ್ಥಾಪಕ ವೃಂದದಲ್ಲಿ ಇರುವವರು ಕೆಲಸ ಬಿಟ್ಟರೆ ಈ ಸಂದರ್ಭದಲ್ಲಿ ಬಾಹ್ಯ ಸಲಹೆಗಾರರು ಮೇಲ್ವಿಚಾರಣೆ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ತೊಡಗಬಹುದು. ಇದು ನಿಮ್ಮ ಉದ್ಯೋಗಕ್ಕೆ ಕುತ್ತು ತರುವ ಲಕ್ಷಣ ಆಗಿರಬಹುದು. ಏನೋ ಬದಲಾವಣೆ ಅಗುತ್ತಿದೆ ಎಂದು ಗಮನಿಸಿದಾಗ ಎಚ್ಚರಿಕೆ ವಹಿಸುವ ಸಮಯವಾಗಿದೆ.

ಆರ್ಥಿಕ ಬಿಕ್ಕಟ್ಟು ಮತ್ತು ವೆಚ್ಚ ಕಡಿತ

ಕಂಪೆನಿಯು ಇದ್ದಕ್ಕಿದ್ದಂತೆ ಸ್ಟೇಷನರಿಗಳ ವೆಚ್ಚದಲ್ಲಿ ಕಡಿತಗೊಳಿಸಲು ಶುರು ಮಾಡಿದರೆ, ಇದು ಉದ್ಯೋಗಿಗಳ ಕಡಿತಕ್ಕೂ ಮುನ್ಸೂಚನೆ ಆಗಿದ್ದಿರಬಹುದು. ಈ ಸಣ್ಣ ಸುಳಿವು ತಿಳಿದು ಮೊದಲೇ ಎಚ್ಚೆತ್ತುಕೊಳ್ಳಬಹುದು.

ನಿಮ್ಮ ಕಿವಿ ಚುರುಕಾಗಿರಲಿ

ಸಂಭವನೀಯ ವಜಾಗಳ ಬಗ್ಗೆ ಪಿಸುಮಾತುಗಳು ಬರುತ್ತಿರುವ ಸಂದರ್ಭದಲ್ಲಿ ಮೊದಲು ವ್ಯವಸ್ಥಾಪಕರ ನಡವಳಿಕೆಯನ್ನು ನೋಡಿ. ಅವರು ಸಭೆಗಳಿಂದ ಹೊರಗುಳಿಯುವುದು ಮತ್ತು ನಿರ್ವಾಹಕರ ಜತೆ ಸಂವಹನವನ್ನು ಕಡಿಮೆ ಮಾಡಿದರೂ ಉದ್ಯೋಗಕ್ಕೆ ಕತ್ತರಿ ಬೀಳುವ ಮುನ್ಸೂಚನೆ ಆಗಿರಬಹುದು.

ಆಗಾಗ್ಗೆ ಕಾರ್ಯಕ್ಷಮತೆಯ ವಿಮರ್ಶೆಗಳು

ಮೆಟಾದಂತಹ ಕೆಲವು ಟೆಕ್ ಸಂಸ್ಥೆಗಳು ವಜಾಗೊಳಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರೂ, ಗೂಗಲ್‌ನಂತಹ ಇತರವು ಕಾರ್ಯಕ್ಷಮತೆಯ ಸಮಸ್ಯೆಗಳನ್ನು ಸಮರ್ಥನೆಯಾಗಿ ಬಳಸಿಕೊಂಡಿವೆ. ಸಾಪ್ತಾಹಿಕ ಕಾರ್ಯಕ್ಷಮತೆಯ ವರದಿಗಳನ್ನು ಸಲ್ಲಿಸಲು ಉದ್ಯೋಗಿಗಳನ್ನು ಕೇಳಿದರೆ, ಸಂಸ್ಥೆಯು ವಜಾಗೊಳಿಸುವ ಮೊದಲು ಉದ್ಯೋಗಿಗಳನ್ನು ಮೌಲ್ಯಮಾಪನ ಮಾಡುತ್ತಿದೆ ಎಂದು ಅರ್ಥೈಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...