alex Certify ಶಿಕ್ಷಕರಿಗೆ ಗುಡ್ ನ್ಯೂಸ್: ರಜೆ ಸೌಲಭ್ಯ, ಹಬ್ಬದ ಮುಂಗಡ, ವಿದೇಶ ಪ್ರವಾಸ ಸೇರಿ 17 ಸೇವೆಗೆ ‘ಶಿಕ್ಷಕ ಮಿತ್ರ’ ಆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕರಿಗೆ ಗುಡ್ ನ್ಯೂಸ್: ರಜೆ ಸೌಲಭ್ಯ, ಹಬ್ಬದ ಮುಂಗಡ, ವಿದೇಶ ಪ್ರವಾಸ ಸೇರಿ 17 ಸೇವೆಗೆ ‘ಶಿಕ್ಷಕ ಮಿತ್ರ’ ಆಪ್

ಶಿಕ್ಷಕರಿಗೆ ಶಿಕ್ಷಕ ಮಿತ್ರ ತಂತ್ರಾಂಶದ ಮೂಲಕ 17 ಸೇವಾ ಸೌಲಭ್ಯಗಳನ್ನು ಆನ್‍ಲೈನ್ ತಂತ್ರಾಂಶದ ಮೂಲಕ ಅನುಷ್ಟಾನಗೊಳಿಸಲು ಸೆ.15 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಆದೇಶಿಸಿರುವಂತೆ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದೆ.

ಶಿಕ್ಷಕರ ಹಬ್ಬದ ಮುಂಗಡ, ರಜಾ ಸೌಲಭ್ಯಗಳು ಹಾಗೂ ವಿದೇಶ ಪ್ರವಾಸ ಮುಂತಾದ 17 ಸೇವಾ ಸೌಲಭ್ಯಗಳನ್ನು ಶಿಕ್ಷಕ ಮಿತ್ರ ತಂತ್ರಾಂಶದ ಮೂಲಕ ಅನುಷ್ಟಾನ ಮಾಡುತ್ತಿದ್ದು, ತ್ವರಿತಗತಿಯಲ್ಲಿ ಶಿಕ್ಷಕರಿಗೆ ಸೇವಾ ಸೌಲಭ್ಯ ನೀಡಲು ಸಾಧ್ಯವಾಗಿದೆ.

ಇದರಿಂದ ಕಚೇರಿಗೆ ಅಲೆಯುವುದು, ಭೌತಿಕವಾಗಿ ಅರ್ಜಿ ಸಲ್ಲಿಸುವ ಕಾರ್ಯವಿಲ್ಲದೇ, ತಾವಿರುವಲ್ಲಿಯೇ ಸ್ಮಾರ್ಟ್‍ಫೋನ್ ಮೂಲಕ ಶಿಕ್ಷಕ ಮಿತ್ರ ಆನ್‍ಲೈನ್ ತಂತ್ರಾಂಶದಲ್ಲಿ ಸೇವಾ ಸೌಲಭ್ಯ ಪಡೆಯಲು ಈ ವಿನೂತನ ಯೋಜನೆಯಿಂದ ಸಾಧ್ಯವಾಗಿದ್ದು ಅತ್ಯಂತ ಯಶಸ್ವಿ ಯೋಜನೆಯಾಗಿದೆ.

ಕೇವಲ ಎರಡೇ ದಿನಗಳಲ್ಲಿ ಕಚೇರಿಗೆ ಒಟ್ಟು 797 ಅರ್ಜಿಗಳು ಸ್ವೀಕೃತಗೊಂಡಿದ್ದು, ಈ ಎಲ್ಲಾ ಅರ್ಜಿಗಳನ್ನು ಎರಡೇ ದಿನಗಳಲ್ಲಿ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಗಳಿಗೆ ಆನ್‍ಲೈನ್ ಮೂಲಕ ಸೌಲಭ್ಯ ಒದಗಿಸಲಾಗಿದೆ ಎಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...