alex Certify ಖುಷಿ ಸುದ್ದಿ….! ಈ ಕಾರಿನ ಮೇಲೆ ಭರ್ಜರಿ ರಿಯಾಯಿತಿ ನೀಡ್ತಿದೆ ಟಾಟಾ ಮೋಟರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಸುದ್ದಿ….! ಈ ಕಾರಿನ ಮೇಲೆ ಭರ್ಜರಿ ರಿಯಾಯಿತಿ ನೀಡ್ತಿದೆ ಟಾಟಾ ಮೋಟರ್ಸ್

Tata Tiago Price - Images, Colours & Reviews - CarWale

ಕಾರು ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಟಾಟಾ ಮೋಟರ್ಸ್ ತನ್ನ ಟಾಟಾ ಟಿಯಾಗೊ ಕಾರಿನ ಮೇಲೆ ಭಾರೀ ರಿಯಾಯಿತಿ ನೀಡ್ತಿದೆ. ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಲಾಯಲ್ಟಿ ಡಿಸ್ಕೌಂಟ್ ರೂಪದಲ್ಲಿ ಲಭ್ಯವಿದೆ. ಗ್ರಾಹಕರು ಸುಮಾರು 28,000 ರೂಪಾಯಿವರೆಗೆ ಲಾಭ ಪಡೆಯಬಹುದಾಗಿದೆ.

ಟಾಟಾ ಟಿಯಾಗೊ ಮೇಲೆ 28,000 ರೂಪಾಯಿಗಳ ಭಾರಿ ರಿಯಾಯಿತಿ ಈ ತಿಂಗಳು ಲಭ್ಯವಿದೆ. ಇದರ ಜೊತೆ 10000 ರೂಪಾಯಿ ನಗದು ರಿಯಾಯಿತಿ, 15,000 ರೂಪಾಯಿವರೆಗೆ ವಿನಿಮಯ ಬೋನಸ್ ಮತ್ತು 3000 ರೂಪಾಯಿ ಕಾರ್ಪೊರೇಟ್ ರಿಯಾಯಿತಿಯನ್ನು ಕಂಪನಿ ನೀಡುತ್ತಿದೆ.

ಈ ಆಫರ್ ಕೆಲ ಪ್ರದೇಶಗಳಲ್ಲಿ ಹಾಗೂ ಕೆಲ ಸಮಯಕ್ಕೆ ಮಾತ್ರ ಸೀಮಿತವಾಗಿದೆ.  ಟಾಟಾ ಟಿಯಾಗೊದ ಸಿಎನ್‌ಜಿ ಮಾದರಿಗೆ ಯಾವುದೇ ರಿಯಾಯಿತಿ ಸಿಗ್ತಿಲ್ಲ. ಟಾಟಾ ಟಿಯಾಗೊ ಆರಂಭಿಕ ಬೆಲೆ ದೆಹಲಿ ಎಕ್ಸ್ ಶೋ ನಲ್ಲಿ 5.19 ಲಕ್ಷ ರೂಪಾಯಿಯಿದೆ. ಟಾಟಾ ಟಿಯಾ 3765 ಎಂಎಂ ಉದ್ದ ಮತ್ತು  1677 ಎಂಎಂ ಅಗಲ ಹಾಗೂ 1535 ಎಂಎಂ ಎತ್ತರದಲ್ಲಿ ಸಿಗಲಿದೆ. ಇದರ ವ್ಹೀಲ್ ಬೇಸ್ 2400 ಎಂಎಂ ಇದ್ದು, ಇದು 35 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಕಾರ್ ಖರೀದಿಸುವ ಆಲೋಚನೆಯಲ್ಲಿದ್ದರೆ ನಿಮ್ಮ ನಗರದಲ್ಲೂ ರಿಯಾಯಿತಿ ಲಭ್ಯವಿದ್ಯಾ ಎಂಬುದನ್ನು ಶೋರೂಮ್ ನಲ್ಲಿ ಚೆಕ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...