alex Certify ಭಾರತದಲ್ಲಿ ಐಫೋನ್​ ತಯಾರಿಸಲಿದೆಯಾ ಟಾಟಾ ಗ್ರೂಪ್ ​? ಈ ಕುತೂಹಲಕ್ಕೆ ಶೀಘ್ರದಲ್ಲೇ ಬೀಳಲಿದೆ ತೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಐಫೋನ್​ ತಯಾರಿಸಲಿದೆಯಾ ಟಾಟಾ ಗ್ರೂಪ್ ​? ಈ ಕುತೂಹಲಕ್ಕೆ ಶೀಘ್ರದಲ್ಲೇ ಬೀಳಲಿದೆ ತೆರೆ

ಮೊಬೈಲ್​ ಉತ್ಪಾದಕ ಕಂಪನಿ ಆಪಲ್​ ಮುಂದಿನ ಎರಡು ತಿಂಗಳೊಳಗೆ ಭಾರತದಲ್ಲಿ ಐಫೋನ್ ​14 ಅನ್ನು ತಯಾರಿಸಲು ಉದ್ದೇಶಿಸಿದೆ. ವಿಶ್ವಾದ್ಯಂತ ಐಫೋನ್​ಗಳ ಪ್ರೈಮರಿ ಪ್ರೊಡ್ಯೂಸರ್​ ಚೈನಾ ಎನಿಸಿಕೊಂಡಿದೆ. ಇದೀಗ ಚೈನಾದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು, ಆಪಲ್​ ತನ್ನ ಹೊಸ ಐಫೋನ್​ ಅನ್ನು ಭಾರತದಲ್ಲಿ ಉತ್ಪಾದಿಸಲು ಪೂರೈಕೆದಾರರೊಂದಿಗೆ ಸಹಕರಿಸುತ್ತದೆ.

ಆಪಲ್​ ಕಂಪನಿಗೆ ಹಲವಾರು ಐಫೋನ್​ಗಳನ್ನು ತಯಾರಿಸುವ ಫಾಕ್ಸ್​ಕಾನ್​, ವಿಸ್ಟ್ರಾನ್​ ಮತ್ತು ಪೆಗಾಟ್ರಾನ್​ ಸೇರಿದಂತೆ ಕೆಲವು ಭಾರತೀಯ ಪಾಲುದಾರರನ್ನು ಸಹ ಹೊಂದಿದೆ. ಈ ನಡುವೆ ಪ್ರಮುಖ ಭಾರತೀಯ ಕಂಪನಿ ಟಾಟಾ ಗ್ರೂಪ್​ ಶೀಘ್ರದಲ್ಲೇ ಭಾರತದಲ್ಲಿ ಐಪೋನ್​ ತಯಾರಿಸಲು ಯೋಜಿಸುತ್ತಿದೆ.

ಮಾಧ್ಯಮ ವರದಿಯ ಪ್ರಕಾರ, ಟಾಟಾ ಗ್ರೂಪ್​ ಆಪಲ್​ನ ಪ್ರಮುಖ ಪೂರೈಕೆದಾರರಲ್ಲಿ ಒಬ್ಬರಾದ ತೈವಾನ್​ನ ಪೂರೈಕೆದಾರ ವಿಸ್ಟ್ರಾನ್​ನೊಂದಿಗೆ ಚರ್ಚೆ ನಡೆಸುತ್ತಿದೆ. ಜಂಟಿ ಉದ್ಯಮ ಘಟಕವನ್ನು ಸ್ಥಾಪಿಸಲು ಚರ್ಚೆ ನಡೆಸುತ್ತಿದೆ.

ಟಾಟಾ ಕಂಪನಿಯು ಉಪ್ಪು, ವಾಹನ, ಎಲೆಕ್ಟ್ರಿಕ್​ ವಾಹನ ಮತ್ತು ಸ್ಟಾ್​ವೇರ್​ ಅನ್ನು ಸಹ ತಯಾರಿಸುತ್ತದೆ. ಟಾಟಾದ ಅಂಗಸಂಸ್ಥೆ ಇನ್ಫಿನಿಟಿ ರಿಟೇಲ್​ ಗ್ರಾಹಕ ಎಲೆಕ್ಟ್ರಾನಿಕ್ಸ್​ ವಸ್ತುಗಳ ಪ್ರಮುಖ ರೀಟೇಲ್​ ಚೈನ್​ ಕ್ರೋಮಾವನ್ನು ಸಹ ಹೊಂದಿದೆ.

ಭಾರತದಲ್ಲಿ ಐಫೋನ್​ ತಯಾರಿಸಿದ ಮೊದಲ ಭಾರತೀಯ ಕಂಪನಿಯೂ ಟಾಟಾ ಆಗಿರಬಹುದು. ಇದರಿಂದ ಕಂಪನಿಗೆ ಲಾಭವಾಗುವುದಲ್ಲದೆ, ಭಾರತಕ್ಕೂ ಲಾಭವಾಗಲಿದೆ, ಏಕೆಂದರೆ ದೇಶವು ಜಾಗತಿಕ ಕಂಪನಿಗಳನ್ನು ಭಾರತದಲ್ಲಿ ಉತ್ಪಾದಿಸಲು ಮತ್ತು ಇತರ ದೇಶಗಳಿಗೆ ರಫ್ತು ಮಾಡಲು ಪ್ರೋತ್ಸಾಹಿಸುತ್ತಿದೆ.

ಆಗಾಗ್ಗೆ ಲಾಕ್​ಡೌನ್​ಗಳ ಪರಿಣಾಮವಾಗಿ ಉತ್ಪಾದನಾ ಕೇಂದ್ರಗಳು ಬಳಲುತ್ತಿರುವ ಚೈನಾದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಆಪಲ್​ ಪರ್ಯಾಯ ಉತ್ಪಾದನಾ ಸ್ಥಳಗಳನ್ನು ಹುಡುಕುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...