alex Certify ಮದುವೆಯಲ್ಲಿ ನೃತ್ಯ ಮಾಡಿದ್ದಕ್ಕೆ ವಧುವಿಗೆ ಕಪಾಳಮೋಕ್ಷ; ಬಳಿಕ ಆಕೆ ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಲ್ಲಿ ನೃತ್ಯ ಮಾಡಿದ್ದಕ್ಕೆ ವಧುವಿಗೆ ಕಪಾಳಮೋಕ್ಷ; ಬಳಿಕ ಆಕೆ ಮಾಡಿದ್ದೇನು ಗೊತ್ತಾ….?

ಮದುವೆ ಸಮಾರಂಭದಲ್ಲಿ ನೃತ್ಯ ಮಾಡಿದಕ್ಕೆ ಮದುಮಗನಿಂದ ಕಪಾಳಮೋಕ್ಷಕ್ಕೆ ಗುರಿಯಾದ ಮದುಮಗಳು ತಮ್ಮ ಸಹೋದರ ಸಂಬಂಧಿಯನ್ನು ಮದುವೆಯಾಗಿ ಜಬರ್ದಸ್ತ್ ಉತ್ತರ ನೀಡಿದ ಘಟನೆ ತಮಿಳುನಾಡಿನಲ್ಲಿ ಜರುಗಿದೆ.

ಕಡಲೂರು ಜಿಲ್ಲೆಯ ಪನ್ರುತಿ ಎಂಬಲ್ಲಿ ಈ ಘಟನೆ ಜರುಗಿದ್ದು, ಪ್ರಖ್ಯಾತ ಉದ್ಯಮಿಯೊಬ್ಬರ ಪುತ್ರಿ ಈ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮದೇ ಬ್ಯೂಟಿ ಸಲೂನ್‌ ನಡೆಸುತ್ತಿದ್ದ ಈಕೆ, ತಿಂಗಳುಗಳ ಹಿಂದೆ ನಿಶ್ಚಿತಾರ್ಥವಾಗಿದ್ದ ವ್ಯಕ್ತಿಯೊಂದಿಗೆ ಜನವರಿ 20ರಂದು ಹಸೆಮಣೆ ಏರಬೇಕಿತ್ತು.

ನಿಮ್ಮ ಮಗುವಿನ ನೆಚ್ಚಿನ ವಿಡಿಯೋ ’ಬೇಬಿ ಶಾರ್ಕ್‌ ಡಾನ್ಸ್‌’ ನಿರ್ಮಿಸಿದೆ ಹೊಸ ದಾಖಲೆ

ಜನವರಿ 19ರಂದು ಮದುವೆ ಮನೆಗೆ ತಮ್ಮ ಸಂಬಂಧಿಕರೊಂದಿಗೆ ಕುಣಿಯುತ್ತಾ ಆಗಮಿಸಿದ ಮದುಮಗಳು ಹಾಗೆ ಬಂದಿದ್ದು ಯಾಕೋ ಮದುಮಗನಿಗೆ ಇಷ್ಟವಾಗಲಿಲ್ಲ. ಹೀಗೇಕೆ ಮಾಡಿದೆ ಎಂದು ಆಕೆಯೊಂದಿಗೆ ವಾದಕ್ಕಿಳಿದ ಮದುಮಗ ಕೊನೆಗೆ ಮದುಮಗಳ ಕೆನ್ನೆಗೆ ಬಾರಿಸಿಬಿಟ್ಟಿದ್ದಾನೆ. ಇದರ ಬೆನ್ನಿಗೆ ಮದುಮಗಳು ಸಹ ಆತನಿಗೂ ಕಪಾಳ ಮೋಕ್ಷ ಮಾಡಿದ್ದಾಳೆ.

ತನ್ನ ಮಗಳಿಗೆ ತನ್ನೆದುರೇ ಕೆನ್ನೆಗೆ ಬಾರಿಸಿದ್ದನ್ನು ಕಂಡ ವಧುವಿನ ತಂದೆ, ಆತನನ್ನು ತನ್ನ ಅಳಿಯನೆಂದು ಒಪ್ಪಲು ಸಾಧ್ಯವಿಲ್ಲವೆಂದು, ಕೂಡಲೇ ಮದುವೆ ಮನೆ ತೊರೆದು ಹೋಗಲು ಗಂಡಿನ ಕಡೆಯವರಿಗೆ ಆಗ್ರಹಿಸಿದ್ದಾರೆ.

ಇದರ ಬೆನ್ನಿಗೇ ತನ್ನ ರಕ್ತ ಸಂಬಂಧಿಗಳೊಂದಿಗೆ ಮಾತುಕತೆ ನಡೆಸಿದ ಉದ್ಯಮಿ, ಕೂಡಲೇ ತನ್ನ ಮಗಳನ್ನು ಅದೇ ದಿನದಂದು ವಿಳ್ಳುಪುರಂನ ಜಿಂಗೀ ಗ್ರಾಮದಲ್ಲಿರವ ತನ್ನ ಸಂಬಂಧಿಯೊಂದಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಜನವರಿ 20ರಂದು ಪನ್ರಿತಿ ತಿರುವತಿಯಗಾಯ್ ದೇವಸ್ಥಾನದಲ್ಲಿ ಇಬ್ಬರ ಮದುವೆ ನೆರವೇರಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...