alex Certify ದುಷ್ಕರ್ಮಿಗಳಿಂದ ಬಿಜೆಪಿ ಎಸ್.ಸಿ. ವಿಭಾಗದ ಜಿಲ್ಲಾಧ್ಯಕ್ಷನ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಷ್ಕರ್ಮಿಗಳಿಂದ ಬಿಜೆಪಿ ಎಸ್.ಸಿ. ವಿಭಾಗದ ಜಿಲ್ಲಾಧ್ಯಕ್ಷನ ಹತ್ಯೆ

ಚೆನ್ನೈ: ತಮಿಳುನಾಡು ಕೇಂದ್ರ ಜಿಲ್ಲಾ ಬಿಜೆಪಿಯ ಎಸ್‌ಸಿ/ಎಸ್‌ಟಿ ವಿಭಾಗದ ಅಧ್ಯಕ್ಷ ಬಾಲಚಂದ್ರನ್ ಅವರನ್ನು ಚೆನ್ನೈನ ಚಿಂತಾದ್ರಿಪೇಟ್‌ ನಲ್ಲಿ ಮೂವರು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಈ ಬೆಳವಣಿಗೆಯ ಕುರಿತು ಮಾತನಾಡಿದ ಬಾಲಚಂದ್ರನ್ ತಂದೆ ವಿಶ್ವನಾಥನ್ ಅವರು, ಕಳೆದ ಆರು ತಿಂಗಳಿಂದ ನನ್ನ ಮಗ ಮತ್ತು ಧರ್ಗಾ ಮೋಹನ್ ನಡುವೆ ಸರಿ ಇರಲಿಲ್ಲ. ಸಂಜಯ್ ಬಿಜೆಪಿ ಸೇರಲು ಬಯಸಿದ್ದರು, ಆದರೆ, ರೌಡಿಗಳೆಂಬ ಕಾರಣಕ್ಕೆ ನನ್ನ ಮಗ ನಿರಾಕರಿಸಿದ್ದರು. ನಂತರ, ನನ್ನ ಮಗ ಮತ್ತು ಅವರ ನಡುವೆ ಘರ್ಷಣೆ ನಡೆದಿತ್ತು ಎಂದು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಚಿಂತಾದ್ರಿಪೇಟೆಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಅವರನ್ನು ಕೊಂದಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಹಿಂದಿನ ದ್ವೇಷದಿಂದ ನಡೆದಿರುವ ಕೊಲೆ ಪ್ರಕರಣವಾಗಿದೆ. ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲು ನಾವು ವಿಶೇಷ ತಂಡವನ್ನು ರಚಿಸಿದ್ದೇವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...