alex Certify ಮತ್ತೊಂದು ಮದುವೆಯಾಗಲು 9 ತಿಂಗಳ ಮಗುವನ್ನೇ ಮಾರಲು ಮುಂದಾದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಮದುವೆಯಾಗಲು 9 ತಿಂಗಳ ಮಗುವನ್ನೇ ಮಾರಲು ಮುಂದಾದ ಮಹಿಳೆ…!

ಗಂಡನಿಂದ ಬೇರಾದ ಬಳಿಕ ಮತ್ತೊಂದು ಮದುವೆಯಾಗಲು ಒಂಬತ್ತು ತಿಂಗಳ ಮಗುವನ್ನು ಮಹಿಳೆಯೊಬ್ಬರು ಮಾರಾಟ ಮಾಡಲು ಮುಂದಾದ ಶಾಕಿಂಗ್ ಘಟನೆಯೊಂದು ತಮಿಳುನಾಡಿನ ಟ್ಯುಟಿಕಾರಿನ್‌ನಲ್ಲಿ ನಡೆದಿದೆ.

ಜೆಬಾಮಲರ್‌ (28) ಎಂಬ ಈಕೆ ಮಣಿಕಂದನ್‌ (38) ಎಂಬ ವ್ಯಕ್ತಿಯೊಂದಿಗೆ 2019ರಲ್ಲಿ ವಿವಾಹವಾಗಿದ್ದರು. ಇಬ್ಬರ ನಡುವೆ ವಿರಸವೇರ್ಪಟ್ಟು ದಾಂಪತ್ಯ ಮುರಿದು ಬಿದ್ದಿದೆ. ಇದಾದ ಬಳಿಕಮ ಜೆಬಮಲರ್‌‌ ತನ್ನ ಹಸುಗೂಸನ್ನು ಹೊತ್ತು ತನ್ನ ಹೆತ್ತವರ ಮನೆಗೆ ಬಂದಿದ್ದಾರೆ.

ಮಹಿಳೆಯರ ಸ್ಕರ್ಟ್​ ಕೆಳಗಿನ ಫೋಟೋ ಕ್ಲಿಕ್ಕಿಸಿದ್ರೆ ಜೈಲೂಟ ಫಿಕ್ಸ್​…!

ಜೆಬಮಲರ್‌ಗೆ ಮರುಮದುವೆ ಮಾಡಲು ಆಕೆಯ ಹೆತ್ತವರು ಮುಂದಾದ ವೇಳೆ ಈ ಹಸುಗೂಸನ್ನು ಒಂದು ದೊಡ್ಡ ಅಡಚಣೆಯನ್ನಾಗಿ ಕಂಡಿದ್ದಾರೆ. ಹೀಗಾಗಿ ಮಗುವನ್ನು ಮಾರಲು ಆಕೆಯ ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಸೆಪ್ಟೆಂಬರ್‌ 23ರಂದು ಜೆಬಮಲರ್‌ ಹಾಗೂ ಆಕೆಯ ಕುಟುಂಬಸ್ಥರು ನಿರ್ಧರಿಸಿ, ಆಕೆಯ ತಂದೆ, ತಾಯಿ ಹಾಗೂ ಸಹೋದರ ಮತ್ತು ಚಿಕ್ಕಪ್ಪ ಪ್ಲಾನ್ ಮಾಡಿ, ಇಬ್ಬರು ಬ್ರೋಕರ್‌ಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಣಿಕಂದನ್‌ಗೆ ಅರಿವಿರಲಿಲ್ಲ.

ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಉಳಿದ ದುಡ್ಡಲ್ಲಿ ಮಾಡಿದ್ದೇನು ಗೊತ್ತಾ….?

ಮಕ್ಕಳಿಲ್ಲದ ಸೆಲ್ವಮಣಿ (52) ಹಾಗೂ ಆತನ ಪತ್ನಿ ಶ್ರೀದೇವಿ (40) ಮಗುವನ್ನು ಮೂರು ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು. ಈ ವೇಳೆ ಮಣಿಕಂದನ್‌ಗೆ ವಿಚಾರ ಗೊತ್ತಾಗಿದ್ದು, ಜೆಬಮಲರ್‌ಳ ಜಾಗಕ್ಕೆ ಬಂದಾಗ ಮಗು ಅಲ್ಲಿಲ್ಲ ಎಂದು ಅರಿವಿಗೆ ಬಂದಿದೆ.

ತನ್ನ ಮಗು ಕಾಣೆಯಾಗಿದೆ ಎಂದು ಮಣಿಕಂದನ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕೂಡಲೇ ಕ್ರಮಕ್ಕೆ ಮುಂದಾದ ಪೊಲೀಸರು ಮಗು ಖರೀದಿ ಮಾಡಿದ ದಂಪತಿ ಹಾಗೂ ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಜೆಬಮಲರ್‌ ಹಾಗೂ ಆಕೆಯ ತಂದೆ ಸೇರಿದಂತೆ ಆರು ಮಂದಿಯನ್ನು ಹಿಡಿಯಲು ಪೊಲೀಸರು ಜಾಲ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...