alex Certify ಮಹಿಳೆಯರ ಸ್ಕರ್ಟ್​ ಕೆಳಗಿನ ಫೋಟೋ ಕ್ಲಿಕ್ಕಿಸಿದ್ರೆ ಜೈಲೂಟ ಫಿಕ್ಸ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಸ್ಕರ್ಟ್​ ಕೆಳಗಿನ ಫೋಟೋ ಕ್ಲಿಕ್ಕಿಸಿದ್ರೆ ಜೈಲೂಟ ಫಿಕ್ಸ್​…!

ಮಹಿಳೆಯರ ಖಾಸಗಿತನಕ್ಕೆ ಗೌರವ ನೀಡಬೇಕು. ಮಹಿಳೆಯರ ಜೀವನಶೈಲಿಯನ್ನು ಪ್ರಶ್ನೆ ಮಾಡುವ ಅಧಿಕಾರ ಪುರುಷರಿಗೆ ಇಲ್ಲ. ಮಹಿಳೆಯರ ಗೌರವಕ್ಕೆ ಚ್ಯುತಿ ತರುವವರ ವಿರುದ್ಧ ಹಾಂಕಾಂಗ್ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಮಹಿಳೆಯರ ಸ್ಕರ್ಟ್​ ಕೆಳಗಿನ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡುವವರನ್ನು ನೇರವಾಗಿ ಜೈಲಿಗೆ ಕಳಿಸೋದಾಗಿ ಹೇಳಿದೆ.

ಹೊಸ ನಿಯಮಗಳ ಪ್ರಕಾರ, ಮಹಿಳೆಯ ಖಾಸಗಿ ಅಂಗಾಂಗಗಳ ಫೋಟೋವನ್ನು ತೆಗೆದು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವವರ ವಿರುದ್ಧ 5 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಹಾಂಕಾಂಗ್​ ಸರ್ಕಾರ ಅನುಮತಿ ನೀಡಿದೆ.

ಕೇವಲ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲದೇ ಖಾಸಗಿ ಸ್ಥಳಗಳಲ್ಲೂ ಇಂತಹ ಚಿತ್ರಗಳನ್ನು ತೆಗೆಯುವುದು ಹಾಗೂ ರೆಕಾರ್ಡಿಂಗ್​ ಮಾಡೋದು ಅಪರಾಧ ಎಂದು ಪರಿಗಣಿಸಲಾಗಿದೆ.

ಈ ರೀತಿಯ ಪ್ರಕರಣಗಳು ದೇಶದಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಹಾಂಕಾಂಗ್​ ಸರ್ಕಾರ ಈ ಕಾನೂನನ್ನು ಜಾರಿಗೆ ತಂದಿದೆ ಎನ್ನಲಾಗಿದೆ. ಹೊಸ ಕಾನೂನು ಜಾರಿಗೆ ಬಂದ ಬಳಿಕ ಇಂತಹ ದೂರುಗಳು ಕಡಿಮೆಯಾಗಲಿದೆ ಎಂದು ನಂಬಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...