alex Certify ಅಧಿಕಾರಕ್ಕೇರುತ್ತಿದ್ದಂತೆಯೇ ಸಂಪೂರ್ಣ ಬದಲಾಯ್ತು ಅಫ್ಘಾನ್‌ ಚಿತ್ರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕಾರಕ್ಕೇರುತ್ತಿದ್ದಂತೆಯೇ ಸಂಪೂರ್ಣ ಬದಲಾಯ್ತು ಅಫ್ಘಾನ್‌ ಚಿತ್ರಣ

ತಾಲಿಬಾನಿ ಆಡಳಿತದಿಂದಾಗಿ ಅಫ್ಘಾನಿಸ್ತಾನದ ಚಿತ್ರಣ ಸಂಪೂರ್ಣ ಬದಲಾಗಿದೆ. ತಾಲಿಬಾನಿಗಳ ಆಡಳಿತ ಮಹಿಳೆಯರ ಜೀವನವನ್ನು ನರಕ ಮಾಡಲಿದೆ. ಶರಿಯಾ ಕಾನೂನಿನ ಪ್ರಕಾರ, ಮಹಿಳೆಯರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ.

ಮಹಿಳೆಯರು ಒಂಟಿಯಾಗಿ ರಸ್ತೆಗೆ ಇಳಿಯಬಾರದು. ಜೊತೆಗೆ ಸಂಬಂಧಿಕರು ಇರಬೇಕಾಗುತ್ತದೆ.

ಮಹಿಳೆಯರು ಮನೆಯಿಂದ ಹೊರಗೆ ಬರುವಾಗ ಬುರ್ಖಾ ಧರಿಸುವುದು ಕಡ್ಡಾಯ.

ಹೈ ಹೀಲ್ಸ್ ಧರಿಸುವಂತಿಲ್ಲ. ಮಹಿಳೆಯರು ಬರುವ ಶಬ್ಧ ಪುರುಷರಿಗೆ ಕೇಳಬಾರದು ಎಂಬ ಕಾರಣಕ್ಕೆ ಮಹಿಳೆಯರು ಹೈ ಹೀಲ್ಸ್ ಧರಿಸುವಂತಿಲ್ಲ.

ಸಾರ್ವಜನಿಕ ಸ್ಥಳದಲ್ಲಿ ಅಪರಿಚಿತರ ಮುಂದೆ ಮಹಿಳೆಯ ಧ್ವನಿ ಕೇಳಬಾರದು.

ನೆಲಮಹಡಿಯ ಮನೆಗಳಲ್ಲಿರುವ ಕಿಟಕಿಗಳಿಗೆ ಬಣ್ಣ ಬಳಿಯಬೇಕು. ಮನೆಯೊಳಗಿರುವ ಮಹಿಳೆಯರು ಕಾಣದಂತೆ ನೋಡಿಕೊಳ್ಳಬೇಕು.

ಮಹಿಳೆಯರು ಫೋಟೋ ತೆಗೆಸಿಕೊಳ್ಳುವಂತಿಲ್ಲ. ಅವರ ಫೋಟೋ, ಪತ್ರಿಕೆಗಳು ಮತ್ತು ಮನೆಯಲ್ಲಿ ಕಾಣಬಾರದು.

ಬಾಲ್ಕನಿಯಲ್ಲಿ ಅಥವಾ ಮನೆಯ ಕಿಟಕಿಯಲ್ಲಿ ಮಹಿಳೆಯರು ಕಾಣಿಸಬಾರದು.

ಮಹಿಳೆಯರು ಯಾವುದೇ ಸಾರ್ವಜನಿಕ ಕೂಟದ ಭಾಗವಾಗಬಾರದು.

ಮಹಿಳೆಯರು ಉಗುರಿಗೆ ಬಣ್ಣ ಹಚ್ಚುವಂತಿಲ್ಲ. ಪ್ರೀತಿಸಿ ಮದುವೆಯಾಗುವಂತಿಲ್ಲ.

ತಾಲಿಬಾನ್ ತನ್ನ ಭಯಾನಕ ಶಿಕ್ಷೆಗಳಿಗೆ ಕುಖ್ಯಾತವಾಗಿದೆ. ಮಹಿಳೆಯರಿಗಾಗಿ ಮಾಡಿದ ನಿಯಮಗಳನ್ನು ಯಾರಾದರೂ ಉಲ್ಲಂಘಿಸಿದರೆ, ಕ್ರೂರ ಶಿಕ್ಷೆ ನೀಡಲಾಗುತ್ತದೆ.

ತಾಲಿಬಾನ್ ಆಳ್ವಿಕೆಯಲ್ಲಿ, ಸಾರ್ವಜನಿಕ ಅವಮಾನ ಮತ್ತು ಮಹಿಳೆಯರನ್ನು ಹತ್ಯೆ ಮಾಡುವುದು ಸಾಮಾನ್ಯ ಶಿಕ್ಷೆಯಾಗಿದೆ. ವ್ಯಭಿಚಾರ ಅಥವಾ ಅಕ್ರಮ ಸಂಬಂಧಗಳಿಗಾಗಿ ಮಹಿಳೆಯರನ್ನು ಸಾರ್ವಜನಿಕವಾಗಿ ಕೊಲ್ಲಲಾಗುತ್ತದೆ. ಮದುವೆಯಾದ ಹುಡುಗಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಆಕೆಯ ಮೂಗು ಮತ್ತು ಕಿವಿಗಳನ್ನು ಕತ್ತರಿಸಿ, ಚಿತ್ರ ಹಿಂಸೆ ನೀಡಲಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...