alex Certify ಮತ್ತೆ ಅಟ್ಟಹಾಸ ಮೆರೆದ ತಾಲಿಬಾನ್ ಉಗ್ರರಿಂದ ಪೈಶಾಚಿಕ ಕೃತ್ಯ: ಕುಟುಂಬದವರ ಎದುರಲ್ಲೇ ಗರ್ಭಿಣಿ ಮಹಿಳಾ ಪೊಲೀಸ್ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಅಟ್ಟಹಾಸ ಮೆರೆದ ತಾಲಿಬಾನ್ ಉಗ್ರರಿಂದ ಪೈಶಾಚಿಕ ಕೃತ್ಯ: ಕುಟುಂಬದವರ ಎದುರಲ್ಲೇ ಗರ್ಭಿಣಿ ಮಹಿಳಾ ಪೊಲೀಸ್ ಬರ್ಬರ ಹತ್ಯೆ

ಕಾಬೂಲ್: ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ನಂತರದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು 8 ತಿಂಗಳ ಗರ್ಭಿಣಿಯಾಗಿದ್ದ ಮಹಿಳಾ ಪೊಲೀಸಳನ್ನು ಕುಟುಂಬದವರ ಕಣ್ಣೆದುರಲ್ಲೇ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ.

ಬಾನು ನೆಗರ್ ಮೃತಪಟ್ಟ ಮಹಿಳಾ ಪೊಲೀಸ್ ಎಂದು ಗುರುತಿಸಲಾಗಿದೆ. ಆಫ್ಘಾನಿಸ್ತಾನದ ಘೋರ್ ಪ್ರಾಂತ್ಯದ ರಾಜಧಾನಿ ಫಿರೋಜ್ ಕೋಹ್ ನ ನಿವಾಸದದಲ್ಲಿದ್ದ ಬಾನು ನೆಗರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುಟುಂಬದವರ ಎದುರಲ್ಲೇ ತಾಲಿಬಾನಿಗಳು ಕ್ರೌರ್ಯ ಮೆರೆದಿದ್ದಾರೆ.

ಗನ್ ಹಿಡಿದು ಮನೆಗೆ ನುಗ್ಗಿದ ಉಗ್ರರು ಮನೆಯವರನ್ನು ಕಟ್ಟಿಹಾಕಿದ್ದಾರೆ. ಬಾನು ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇದೇ ರೀತಿ ಹಲವು ಕಡೆಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಹಿಂಸಾಚಾರ ನಡೆಸುತ್ತಿರುವ ತಾಲಿಬಾನ್ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...