alex Certify ಪತಿ ಮನೆಯವರು ಸೊಸೆಯ ಚಿನ್ನಾಭರಣ ಇಟ್ಟುಕೊಳ್ಳುವುದು ಹಿಂಸೆಯಲ್ಲ: ಸುಪ್ರೀಂ ಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಮನೆಯವರು ಸೊಸೆಯ ಚಿನ್ನಾಭರಣ ಇಟ್ಟುಕೊಳ್ಳುವುದು ಹಿಂಸೆಯಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಪತಿಯ ಪೋಷಕರು ಸೊಸೆಯ ಚಿನ್ನಾಭರಣಗಳನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳುವುದು ಹಿಂಸೆ ಆಗುವುದಿಲ್ಲವೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ. ಮಹೇಶ್ವರಿ ಅವರಿದ್ದ ಪೀಠದಲ್ಲಿ ಈ ಕುರಿತಾದ ಅರ್ಜಿಯ ವಿಚಾರಣೆ ನಡೆದಿದ್ದು, ಸೊಸೆಯ ಚಿನ್ನಾಭರಣಗಳನ್ನು ಗಂಡನ ಮನೆಯವರು ವಶದಲ್ಲಿ ಇಟ್ಟುಕೊಂಡಿದ್ದರೆ ಅದನ್ನು ಐಪಿಸಿ ಸೆಕ್ಷನ್ 498 ಎ ಅನ್ವಯ ಹಿಂಸೆ ಎಂದು ಹೇಳಲಾಗದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಪಂಜಾಬ್ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ. ಸೆಕ್ಷನ್ 498 ಎ ಅನ್ವಯ ಗಂಡ ಅಥವಾ ಗಂಡನ ಮನೆಯವರು, ಸಂಬಂಧಿಕರು ನೀಡುವುದು ಕಿರುಕುಳ ಆಗಿದೆ. ತೊಂದರೆಗೊಳಗಾದ ಮಹಿಳೆ ನೀಡುವ ದೂರು ಈ ಸೆಕ್ಷನ್ ವ್ಯಾಪ್ತಿಗೆ ಬರಲಿದೆ. ಅರ್ಜಿದಾರ ಮಹಿಳೆ ತಮ್ಮ ಅತ್ತೆ ಮತ್ತು ಮೈದುನ ಚಿನ್ನಾಭರಣಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಆಭರಣಗಳ ವಿವರ ನೀಡಿಲ್ಲ. ಸಾಮಾನ್ಯ ಆರೋಪ ಮಾಡಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...