alex Certify ಮುಸ್ಲಿಂ ಮಹಿಳೆಗೆ ಹಿಜಾಬ್ ತೆಗೆಯಲು ಹೇಳಿದ ಬ್ಯಾಂಕ್‌ ನೌಕರರು; ಸಿಎಂ‌ ನಿತೀಶ್ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಸ್ಲಿಂ ಮಹಿಳೆಗೆ ಹಿಜಾಬ್ ತೆಗೆಯಲು ಹೇಳಿದ ಬ್ಯಾಂಕ್‌ ನೌಕರರು; ಸಿಎಂ‌ ನಿತೀಶ್ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ‌

ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಹೊಸರೂಪ ಪಡೆದುಕೊಳ್ಳುತ್ತಿದೆ.‌ ಬಿಹಾರದಲ್ಲಿ ಈ ಸಂಬಂಧ ಘಟನೆಯೊಂದು ನಡೆದಿದ್ದು, ಹಣ ಪಡೆಯಲು ಬಂದ ಮುಸ್ಲಿಂ ಮಹಿಳೆಗೆ ಹಿಜಾಬ್ ತೆಗೆದು ಹಾಕಿ ಇಲ್ಲದಿದ್ದರೆ ನಿಮಗೆ ಯಾವುದೇ ಸೇವೆ ನೀಡುವುದಿಲ್ಲವೆಂದು ಬ್ಯಾಂಕ್ ಉದ್ಯೋಗಿಗಳು ತಿಳಿಸಿದ್ದಾರೆ.

ಶನಿವಾರ ಬಿಹಾರದ ಬೇಗುಸರಾಯಿ ಜಿಲ್ಲೆಯಲ್ಲಿರುವ ಯೂಕೋ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ಎರಡು ನಿಮಿಷಕ್ಕಿಂತ ಹೆಚ್ಚು ಸಮಯದ ವಿಡಿಯೋದಲ್ಲಿ ಹಿಜಾಬ್ ಧರಿಸಿದ್ದ ಮುಸ್ಲಿಂ‌ ಮಹಿಳೆಯು ಬ್ಯಾಂಕ್ ಉದ್ಯೋಗಿಗಳೊಂದಿಗೆ ಜಗಳ ಮಾಡುತ್ತಿರುವುದನ್ನ ನೋಡಬಹುದು.‌ ಆಕೆಯೊಂದಿಗೆ ಅವಳ ತಂದೆಯೂ ಧ್ವನಿಗೂಡಿಸಿ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ನನ್ನ ಮಗಳು ಪ್ರತಿಸಲ ಹಿಜಾಬ್ ಧರಿಸಿಯೇ ಬ್ಯಾಂಕ್‌ ಗೆ ಬರುತ್ತಾಳೆ, ಈಗ ಮಾತ್ರ ಏಕೆ ಈ‌ ನಿಯಮ.‌ ಕರ್ನಾಟಕದಲ್ಲೆಲ್ಲೋ ಯಾವುದೋ‌ ನಿಯಮ‌ ಮಾಡಿದ್ದಾರೆ, ಆದರೆ ಅದನ್ನ ಬಿಹಾರದಲ್ಲಿ ಏಕೆ ಆಚರಿಸಬೇಕು.‌ ಬ್ಯಾಂಕ್ ಆವರಣದಲ್ಲಿ ಹಿಜಾಬ್ ಧರಿಸಬಾರದು ಎಂಬ ನಿಯಮವಿದೆಯೇ ಎಂದು ಆಕೆಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದರೆ.

ಭಾರತದ ಲೋಕಲ್ ಟ್ಯಾಲೆಂಟ್; ತನ್ನ ಮಧುರ ಕಂಠದ ಮೂಲಕ ಕೇಳುಗರನ್ನ ಮಂತ್ರಮುಗ್ಧರನ್ನಾಗಿಸಿದ ವ್ಯಕ್ತಿ…!

ಬ್ಯಾಂಕ್ ಅಧಿಕಾರಿಗಳು ವಿಡಿಯೋ ಚಿತ್ರೀಕರಿಸುವುದನ್ನ ನಿಲ್ಲಿಸಿ ಎಂದು ಪದೇ ಪದೇ ಕೇಳಿದ್ದರು, ಮುಸ್ಲಿಂ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಕಚೇರಿಯೂ ವಿಡಿಯೋ ಹಂಚಿಕೊಂಡು ಸಿಎಂ ನಿತೀಶ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಅಧಿಕಾರಕ್ಕಾಗಿ‌ ನೀವು ನಿಮ್ಮ ಸಿದ್ಧಾಂತ, ನೈತಿಕ ಜವಾಬ್ದಾರಿ, ಸಾಮಾಜಿಕ ಮೌಲ್ಯಗಳನ್ನು ಕಳೆದುಕೊಂಡಿದ್ದೀರೆಂದು ತಿಳಿದಿದೆ. ಆದರೆ ನೀವು ಭಾರತದ ಸಂವಿಧಾನದ ಮೇಲೆ ಪ್ರಮಾಣ‌ ಮಾಡಿ ಅಧಿಕಾರ ಸ್ವೀಕರಿಸಿದ್ದೀರಾ. ಸಂವಿಧಾನವನ್ನು ಗೌರವಿಸಿ ಆದರೂ ಆ ಮಹಿಳೆಗೆ ಕಿರುಕುಳ‌ ನೀಡಿದ ಬ್ಯಾಂಕ್ ಉದ್ಯೋಗಿಗಳನ್ನ ಬಂಧಿಸಿ ಎಂದಿದ್ದಾರೆ.‌

ಈ ಬಗ್ಗೆ ಪ್ರತಿಕ್ರಿಯಿಸಿ, ಸ್ಟೇಟ್ಮೆಂಟ್ ಬಿಡುಗಡೆ ಮಾಡಿರುವ ಬ್ಯಾಂಕ್, ನಾವು ಪ್ರತಿಯೊಬ್ಬರ ಧರ್ಮವನ್ನು ಗೌರವಿಸುತ್ತೇವೆ. ಯಾರ ಧಾರ್ಮಿಕ ನಂಬಿಕೆಗಳಿಗೂ ಧಕ್ಕೆ ತರುವ ಉದ್ದೇಶ ನಮ್ಮದಲ್ಲ. ನಾವು ಗ್ರಾಹಕರನ್ನು ಅವರ ಧರ್ಮದ ಮೇಲೆ ಅಳೆಯುವುದಿಲ್ಲ, ಘಟನೆಯ ಸತ್ಯಾಸತ್ಯತೆಗಳನ್ನು ಬ್ಯಾಂಕ್ ಪರಿಶೀಲಿಸುತ್ತಿದೆ ಎಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...