alex Certify ಭಾರತದ ಲೋಕಲ್ ಟ್ಯಾಲೆಂಟ್; ತನ್ನ ಮಧುರ ಕಂಠದ ಮೂಲಕ ಕೇಳುಗರನ್ನ ಮಂತ್ರಮುಗ್ಧರನ್ನಾಗಿಸಿದ ವ್ಯಕ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಲೋಕಲ್ ಟ್ಯಾಲೆಂಟ್; ತನ್ನ ಮಧುರ ಕಂಠದ ಮೂಲಕ ಕೇಳುಗರನ್ನ ಮಂತ್ರಮುಗ್ಧರನ್ನಾಗಿಸಿದ ವ್ಯಕ್ತಿ…!

ಭಾರತದಲ್ಲಿ ಪ್ರತಿಭಾವಂತರ ಕೊರತೆಯಿಲ್ಲ. ಗಲ್ಲಿಗಲ್ಲಿಯಲ್ಲೂ ಒಂದಲ್ಲಾ ಒಂದು ವಿಭಿನ್ನ ಪ್ರತಿಭೆ ಇರುವ ಲೋಕಲ್ ಟ್ಯಾಲೆಂಟ್ ಇದ್ದೇ ಇರುತ್ತಾರೆ. ಅದೃಷ್ಟವಶಾತ್, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಇಂತಹ ನೈಜ ಪ್ರತಿಭೆಗಳು ಜಗತ್ತಿಗೆ ಪರಿಚಯವಾಗುತ್ತಿದ್ದಾರೆ.

ಇಂತಹ ನೈಜ ಪ್ರತಿಭೆ ಇರುವ ವ್ಯಕ್ತಿಯೊಬ್ಬರು ಈಗ ಬೆಳಕಿಗೆ ಬಂದಿದ್ದಾರೆ. 30 ವರ್ಷ ವಯಸ್ಸಿನ ಇವರು ತಮ್ಮ ಹೆಸರು ಹೇಳಲು ಇಚ್ಛಿಸಿಲ್ಲ, ಆದರೆ ತಮ್ಮ ಹಾಡುವ ಕೌಶಲ್ಯದ ಮೂಲಕ ಇಂಟರ್ನೆಟ್ ಜಗತ್ತನ್ನ ಬೆರಗುಗೊಳಿಸಿದ್ದಾರೆ. ಇವರ ಹಾಡನ್ನು ಕೇಳಿದ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.

ವೀಡಿಯೋದಲ್ಲಿ ಆ ವ್ಯಕ್ತಿ ರಸ್ತೆಯಲ್ಲಿ ನಿಂತು ಧರ್ಮೇಂದ್ರ ಅವರ ಖತ್ರೋನ್ ಕೆ ಖಿಲಾಡಿ ಚಿತ್ರದ ‘ತುಮ್ಸೆ ಬನಾ ಮೇರಾ ಜೀವನ್’ ಹಾಡನ್ನು, ಹಾಡುತ್ತಿರುವುದನ್ನು ಕಾಣಬಹುದು. ಅವರು ತನ್ನ ಸುಂದರವಾದ ಧ್ವನಿಯಲ್ಲಿ ಹಾಡನ್ನು ಹಾಡುತ್ತಿರುವಾಗ, ಅನೇಕ ದಾರಿಹೋಕರು ಅಲ್ಲಿ ನಿಂತು ಅವರ ಕಂಠಸಿರಿಯನ್ನು ಮಂತ್ರಮುಗ್ಧರಾಗಿ ಕೇಳಿಸಿಕೊಳ್ಳುತ್ತಿರುವುದನ್ನು ಕಾಣಬಹುದು.

BIG BREAKING: ನಿಯಂತ್ರಣಕ್ಕೆ ಬಾರದ ಪರಿಸ್ಥಿತಿ; ಮತ್ತೆ ಮತ್ತೆ ಕಲ್ಲು ತೂರಾಟ; ಪೊಲೀಸರಿಂದ ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್

ಯಾವುದೇ ಹಿನ್ನೆಲೆ ಸಂಗೀತ, ಆಟೋಟ್ಯೂನ್ ಏನೇನೂ ಇಲ್ಲದೇ ಕೇವಲ ತನ್ನ ಕಂಠದಿಂದ ಸುಮಧುರವಾಗಿ ಹಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವೀಡಿಯೊವನ್ನು 24LiveAssam ಹೆಸರಿನ ಸುದ್ದಿ ಚಾನೆಲ್ ಹಂಚಿಕೊಂಡಿದೆ. ಈ ವಿಡಿಯೋಗೆ ಫೇಸ್‌ಬುಕ್‌ನಲ್ಲಿ ಬರೋಬ್ಬರಿ 9.9 ಮಿಲಿಯನ್ ವೀಕ್ಷಣೆಗಳು ಮತ್ತು 17,000 ಕ್ಕೂ ಹೆಚ್ಚು ಕಾಮೆಂಟ್‌ಗಳು ಒಲಿದಿವೆ. ಈ ವ್ಯಕ್ತಿ ಕೇವಲ ರೇಡಿಯೋ ಕೇಳುವ ಮೂಲಕ ಹಾಡುವುದನ್ನು ಕಲಿತಿದ್ದಾನೆ ಎಂದು ಹೇಳಲಾಗುತ್ತಿದೆ.

ಸುಮಧುರ ಕಂಠದ ವ್ಯಕ್ತಿಯ ಹಾಡನ್ನು ಕೇಳಿದ, ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಪ್ರತಿಭೆಗೆ ಸಂಪೂರ್ಣ ವಿಸ್ಮಯರಾಗಿದ್ದಾರೆ. ಅನೇಕರು ಅವರನ್ನು ‘ತುಮ್ಸೆ ಬನಾ ಮೇರಾ ಜೀವನ್’ ಹಾಡಿನ ಮೂಲ ಗಾಯಕ ಮೊಹಮ್ಮದ್ ಅಜೀಜ್ಗೆ ಹೋಲಿಸಿದ್ದಾರೆ. ಹಲವರು ಅವರಿಗೆ ಬಾಲಿವುಡ್ ಹಾಡುಗಳನ್ನು ಹಾಡಲು ಅವಕಾಶ ನೀಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

https://www.youtube.com/watch?v=Wr_5eD-nV3w

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...