alex Certify ಟೀಂ ಇಂಡಿಯಾದ ಈ ಆಟಗಾರನಿಗೆ ಕೊನೆಯಾಗಲಿದೆ ಟಿ-20 ವಿಶ್ವಕಪ್…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾದ ಈ ಆಟಗಾರನಿಗೆ ಕೊನೆಯಾಗಲಿದೆ ಟಿ-20 ವಿಶ್ವಕಪ್…..?

ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯ ಸೋಲುಂಡ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ. ಪಂದ್ಯಕ್ಕೂ ಮುನ್ನ ತಂಡದಲ್ಲಿ ಕೆಲ ಬದಲಾವಣೆಯಾಗಲಿದೆ. ನ್ಯೂಜಿಲ್ಯಾಂಡ್ ವಿರುದ್ಧ ಮಾತ್ರವಲ್ಲ ತಂಡದಿಂದಲೇ ಹೊರಬೀಳುವ ಲಕ್ಷಣ ಒಬ್ಬ ಆಟಗಾರನಲ್ಲಿ ಕಾಣ್ತಿದೆ.

ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್, ವೃತ್ತಿ ಜೀವನ ಅಲುಗಾಡ್ತಿದೆ. ಭುವಿ ಅನೇಕ ದಿನಗಳಿಂದ ಉತ್ತಮ ಆಟ ಪ್ರದರ್ಶನ ಮಾಡ್ತಿಲ್ಲ. ಗಾಯ ಮತ್ತು ಅವರ ಫಿಟ್ನೆಸ್ ಇದಕ್ಕೆ ಕಾರಣವಾಗಿದೆ. ಭುವಿ ಈಗಾಗಲೇ ಟೆಸ್ಟ್ ತಂಡದಿಂದ ದೂರವಿದ್ದಾರೆ. ಇದೇ ಆಟ ಮುಂದುವರೆಸಿದ್ರೆ, ಸೀಮಿತ ಓವರ್‌ ತಂಡದಿಂದ ಹೊರಬೀಳಲಿದ್ದಾರೆ. ಇದೇ ಕೊನೆ ವಿಶ್ವಕಪ್ ಆಗುವ ಸಾಧ್ಯತೆಯಿದೆ.

ಪಾಕಿಸ್ತಾನದ ವಿರುದ್ಧವೂ ಭುವನೇಶ್ವರ್ ಕುಮಾರ್ ಆಟ ಕಳಪೆಯಾಗಿತ್ತು. ಆರಂಭಿಕ ಓವರ್‌ಗಳಲ್ಲಿ ವಿಕೆಟ್ ಪಡೆಯುತ್ತಾರೆಂಬ ನಿರೀಕ್ಷೆಯನ್ನು ಸುಳ್ಳು ಮಾಡಿದ್ದರು. ಪಾಕಿಸ್ತಾನದ ವಿರುದ್ಧ ಶಾರ್ದೂಲ್ ಠಾಕೂರ್ ಆಡ್ಬೇಕಿತ್ತೆಂಬ ಮಾತುಗಳು ಕೇಳಿ ಬಂದಿವೆ. ಮುಂದಿನ ಪಂದ್ಯದಲ್ಲಿ ಶಾರ್ದೂಲ್ ಗೆ ಸ್ಥಾನ ಸಿಗುವ ಸಾಧ್ಯತೆಯಿದೆ.

ಟೀಂ ಇಂಡಿಯಾ 29 ವರ್ಷಗಳ ನಂತರ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಸೋತಿದೆ. ಮಹೇಂದ್ರ ಸಿಂಗ್ ಧೋನಿ, ಸೌರವ್ ಗಂಗೂಲಿ ಮತ್ತು ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಭಾರತ, ಪಾಕ್ ಮಣಿಸಿತ್ತು. ವಿರಾಟ್ ಕೊಹ್ಲಿ, ಪಾಕಿಸ್ತಾನದ ವಿರುದ್ಧ ಸೋಲುಂಡ ಭಾರತದ ಮೊದಲ ನಾಯಕರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...