alex Certify Shocking: ಕೇವಲ 11 ನಿಮಿಷ ನಡೆದಿತ್ತು ಅತ್ಯಾಚಾರ ಎಂಬ ಕಾರಣಕ್ಕೆ ಇಳಿಕೆಯಾಯ್ತು ಜೈಲು ಶಿಕ್ಷೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಕೇವಲ 11 ನಿಮಿಷ ನಡೆದಿತ್ತು ಅತ್ಯಾಚಾರ ಎಂಬ ಕಾರಣಕ್ಕೆ ಇಳಿಕೆಯಾಯ್ತು ಜೈಲು ಶಿಕ್ಷೆ…!

ಸ್ವಿಟ್ಜರ್ಲೆಂಡ್ ನಲ್ಲಿ ದಂಗಾಗಿಸುವ ಪ್ರಕರಣ ಬೆಳಕಿಗೆ ಬಂದಿದೆ. ನ್ಯಾಯಾಲಯ ಅತ್ಯಾಚಾರ ಆರೋಪಿಯ ಶಿಕ್ಷೆಯನ್ನು ಕಡಿಮೆ ಮಾಡಿದ ಕಾರಣ ವಿಚಿತ್ರವಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಜನರು ಬೀದಿಗಿಳಿದರು ಪ್ರತಿಭಟನೆ ನಡೆಸಿದ್ದಾರೆ.

ಅತ್ಯಾಚಾರದ ಅಪರಾಧಿಗಳ ಶಿಕ್ಷೆಯನ್ನು ಕಡಿಮೆ ಮಾಡಿದ ನ್ಯಾಯಾಧೀಶೆ ಲಿಜ್ಲೊಟ್ ಹೇಂಜ್, ಆರೋಪಿ ಕೇವಲ 11 ನಿಮಿಷ ಅತ್ಯಾಚಾರವೆಸಗಿದ್ದಾನೆ. ಆದ್ದರಿಂದ ಆತನ ಶಿಕ್ಷೆಯನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ನ್ಯಾಯಾಧೀಶೆಯ ಈ ನಿರ್ಧಾರವು ಪ್ರತಿಭಟನೆಗೆ ಕಾರಣವಾಗಿದೆ. ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ.

ವರದಿಯ ಪ್ರಕಾರ, ಕಳೆದ ವರ್ಷ ಬಾಸೆಲ್ ನಲ್ಲಿ 33 ವರ್ಷದ ಮಹಿಳೆ ಮೇಲೆ ಇಬ್ಬರು ಪೋರ್ಚುಗೀಸರು ಅತ್ಯಾಚಾರವೆಸಗಿದ್ದರು. ಅವರಲ್ಲಿ ಒಬ್ಬನ ವಯಸ್ಸು 17 ವರ್ಷ ಮತ್ತು ಇನ್ನೊಬ್ಬನ ವಯಸ್ಸು 32 ವರ್ಷ. ಮೊದಲ ಅಪರಾಧಿಗೆ ಇನ್ನೂ ಶಿಕ್ಷೆ ನೀಡಿಲ್ಲ. ಎರಡನೇ ಅಪರಾಧಿಗೆ ನೀಡಿದ್ದ 51 ತಿಂಗಳ ಶಿಕ್ಷೆಯನ್ನು 36 ತಿಂಗಳಿಗೆ ಇಳಿಸಲಾಗಿದೆ.

ಈ ತೀರ್ಪು ನೀಡಿ ನ್ಯಾಯಾಲಯ ತಪ್ಪು ಸಂದೇಶ ರವಾನೆ ಮಾಡ್ತಿದೆ ಎಂದು ಜನರು ಆರೋಪ ಮಾಡಿದ್ದಾರೆ. ಇದು ಅಪರಾಧಿಗಳ ಧೈರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...