alex Certify ದೇಹದ ಈ ಭಾಗಗಳಿಂದ ಬೆವರುವುದು ಹೃದಯಾಘಾತದ ಮುನ್ಸೂಚನೆ ಇರಬಹುದು ಎಚ್ಚರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದ ಈ ಭಾಗಗಳಿಂದ ಬೆವರುವುದು ಹೃದಯಾಘಾತದ ಮುನ್ಸೂಚನೆ ಇರಬಹುದು ಎಚ್ಚರ….!

ಹೃದಯಾಘಾತದ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕೆಟ್ಟ ಜೀವನಶೈಲಿ, ಕಲುಷಿತ ವಾತಾವರಣ ಮತ್ತು ವಿಷಯುಕ್ತ ಆಹಾರದಿಂದಾಗಿ ಹೃದಯದ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಹೃದಯಾಘಾತವು ಮಾರಣಾಂತಿಕ ಕಾಯಿಲೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಕ್ಕೇ ಅಪಾಯವಾಗಬಹುದು. ಹೃದಯಾಘಾತವಾಗುವ ಮೊದಲು ನಮ್ಮ ದೇಹದಲ್ಲಿ ಕೆಲವು ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿದರೆ, ಚಿಕಿತ್ಸೆ ನೀಡಿ ಜೀವ ಉಳಿಸಬಹುದು.

ಬೆವರುವುದು ಹೃದಯಾಘಾತದ ಸಂಕೇತ!

ಹೃದಯಾಘಾತ ಸಂಭವಿಸುವ ಮೊದಲು ಅತಿಯಾಗಿ ಬೆವರುತ್ತದೆ. ಬೆವರುವಿಕೆಯನ್ನು ಸಾಮಾನ್ಯ ಸಮಸ್ಯೆ ಎಂದು ನಾವು ನಿರ್ಲಕ್ಷಿಸುತ್ತೇವೆ, ಆದರೆ ಇದು ಹೃದಯಾಘಾತದ ಸಂಕೇತವಾಗಿರಬಹುದು. ಹೃದಯಾಘಾತದ ಮೊದಲು, ದೇಹದ ಅನೇಕ ಭಾಗಗಳಿಂದ ಬೆವರು ಹೊರಬರುತ್ತದೆ. ಬೆವರುವಿಕೆಯೊಂದಿಗೆ ಉಸಿರಾಟದ ತೊಂದರೆ, ಆಯಾಸ, ವಾಕರಿಕೆ, ಭಯ ಮತ್ತು ಎದೆಯಲ್ಲಿ ಭಾರವನ್ನು ಅನುಭವಿಸಿದರೆ ಅದು ಹೃದಯಾಘಾತದ ಲಕ್ಷಣ.

ಈ ಸ್ಥಳಗಳಿಂದ ಹೊರಬರುತ್ತದೆ ಬೆವರು!

ಸಾಮಾನ್ಯವಾಗಿ ನಮ್ಮ ಕಂಕುಳಲ್ಲಿ ಮತ್ತು ಬೆನ್ನಿನಲ್ಲಿ ವಿಪರೀತ ಬೆವರು ಬರುತ್ತದೆ. ಆದರೆ ಹೃದಯಾಘಾತದ ಸಮಸ್ಯೆಯಾದರೆ ಮುಖ, ಕುತ್ತಿಗೆ ಮತ್ತು ಹಣೆಯ ಮೇಲೆ ಬೆವರು ಬರುತ್ತದೆ. ಅಂಗೈಗಳು ತಣ್ಣಗಾಗುತ್ತಿದ್ದರೆ ಮತ್ತು ಅಂಗೈ ಕೂಡ ಬೆವರುತ್ತಿದ್ದರೆ ಅದು ಹೃದಯಾಘಾತದ ಲಕ್ಷಣವೂ ಆಗಿರಬಹುದು.

ಹೃದಯಾಘಾತದ ಮೊದಲು ಬೆವರುವುದೇಕೆ?

ಹೃದಯಾಘಾತವಾಗುವ ಮುನ್ನ ಬೆವರು ಬರುವುದಕ್ಕೆ ವೈಜ್ಞಾನಿಕ ಕಾರಣವಿದೆ. ಚಳಿಗಾಲ, ಬೇಸಿಗೆ ಅಥವಾ ಮಳೆಗಾಲ ಹೀಗೆ ಯಾವುದೇ ಋತುವಿನಲ್ಲಾದರೂ ಹೃದಯಾಘಾತಕ್ಕೆ ಮುನ್ನ ಬೆವರು ಬರುತ್ತದೆ. ನಮ್ಮ ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಿಸಿದಾಗ ಮತ್ತು ಆಮ್ಲಜನಕವು ಹೃದಯವನ್ನು ತಲುಪಲು ಸಾಧ್ಯವಾಗದಿದ್ದಾಗ, ದೇಹದ ಉಷ್ಣತೆಯನ್ನು ನಿಯಂತ್ರಿಸಲು ದೇಹವು ಬೆವರನ್ನು ಬಿಡುಗಡೆ ಮಾಡುತ್ತದೆ. ಅತಿಯಾದ ಬೆವರುವಿಕೆ ಮತ್ತು ಆಯಾಸವಿದ್ದಾಗ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...