alex Certify ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡಿದ್ದು ನಾವು, ದುಡಿದವರು ನಾವು; ನಮ್ಮ ಪಾಲೆಷ್ಟು…? ಬಸವಜಯ ಮೃತ್ಯುಂಜಯ ಶ್ರೀ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡಿದ್ದು ನಾವು, ದುಡಿದವರು ನಾವು; ನಮ್ಮ ಪಾಲೆಷ್ಟು…? ಬಸವಜಯ ಮೃತ್ಯುಂಜಯ ಶ್ರೀ ಪ್ರಶ್ನೆ

ವಿಜಯಪುರ: ಮೀಸಲಾತಿಯಲ್ಲಿ ಒಕ್ಕಲಿಗರಿಗೆ 2ಸಿ, ಲಿಂಗಾಯಿತರಿಗೆ 2ಡಿ ಕೆಟಗರಿ ಸೃಷ್ಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮತ್ತು ಹಕ್ಕೊತ್ತಾಯ ಮಾಡಿದ್ದು ನಾವು. ಉಳಿದ ಲಿಂಗಾಯಿತರನ್ನು 2 ಡಿ ಗೆ ಸೇರಿಸುವುದಾಗಿ ಹೇಳಿದ್ದಾರೆ. 2 ಡಿ ಮೀಸಲಾತಿ ಕ್ರೆಡಿಟ್ ಪಂಚಮಸಾಲಿಯವರಿಗೆ ಸಲ್ಲುತ್ತದೆ. ದುಡಿದವರು ನಾವು. ನಮ್ಮ ಪಾಲು ಎಷ್ಟು ಎಂದು ಶ್ರೀಗಳು ಪ್ರಶ್ನಿಸಿದ್ದಾರೆ.

2 ಡಿ ಯಲ್ಲಿ ಪಂಚಮಸಾಲಿಯವರಿಗೆ ಮೀಸಲು ಪ್ರಮಾಣ ಎಷ್ಟು ಎಂದು ಪ್ರಶ್ನಿಸಿದ ಅವರು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದಲ್ಲಾದ ನಿರ್ಣಯ ಗೊಂದಲಕ್ಕೀಡು ಮಾಡಿದೆ. ಮೀಸಲಾತಿ ಪ್ರಮಾಣ ಎಷ್ಟು ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಲಿ ಎಂದು ವಿಜಯಪುರದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...