alex Certify ಪಾಕ್​ ಗಡಿಯಲ್ಲಿ ಶಂಕಿತ ಪಾರಿವಾಳವನ್ನು ಸೆರೆ ಹಿಡಿದ ಗಡಿ ಭದ್ರತಾ ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್​ ಗಡಿಯಲ್ಲಿ ಶಂಕಿತ ಪಾರಿವಾಳವನ್ನು ಸೆರೆ ಹಿಡಿದ ಗಡಿ ಭದ್ರತಾ ಪಡೆ

ಜಮ್ಮು & ಕಾಶ್ಮೀರದ ಅಖ್ನೂರ್​ ಸೆಕ್ಟರ್​ನ ಪಾಕಿಸ್ತಾನದ ಗಡಿಯ ಬಳಿ ನೀಲಿ ಹಾಗೂ ಹಳದಿ ಬಣ್ಣದ ಉಂಗುರವನ್ನು ಕಾಲಿಗೆ ಧರಿಸಿದ್ದ ಶಂಕಿತ ಪಾರಿವಾಳವೊಂದನ್ನು ಸೆರೆಹಿಡಿಯಲಾಗಿದೆ ಎಂದು ಬಿಎಸ್​ಎಫ್​ ಮಾಹಿತಿ ನೀಡಿದೆ.

ಗಡಿ ಭದ್ರತಾ ಪಡೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಪಾರಿವಾಳವನ್ನು ಸೆಪ್ಟೆಂಬರ್​​ 1ರಂದು ಸಂಜೆ 6:15ರ ಸುಮಾರಿಗೆ ಹಿಡಿಯಲಾಗಿದೆ.

ಬಿಎಸ್​ಎಫ್​ ಪಡೆ ಸೆರೆ ಹಿಡಿದ ಈ ಪಾರಿವಾಳದ ಕಾಲಿಗೆ ನೀಲಿ ಹಾಗೂ ಹಳದಿ ಬಣ್ಣದ ಉಂಗುರವನ್ನು ತೊಡಿಸಲಾಗಿತ್ತು. ಬಲಗಾಲಿನ ಉಂಗುರದಲ್ಲಿ 0315-787659 ಎಂದು ಬರೆಯಲಾಗಿತ್ತು. ಹಾಗೂ ಎಡಗಾಲಿನ ಉಂಗುರದಲ್ಲಿ ಓಕೆ ಎಂದು ಬರೆಯಲಾಗಿತ್ತು. ಈ ವಿಚಾರವಾಗಿ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲ ಸಮಸ್ಯೆಗಳನ್ನು ಹೆಚ್ಚು ಮಾಡುತ್ತೆ ‘ಸೌತೆಕಾಯಿ’

ಮೇ ತಿಂಗಳ ಆರಂಭದಲ್ಲಿಯೂ ಸ್ಥಳೀಯರು ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಇದೇ ರೀತಿ ಕಾಲಿಗೆ ಉಂಗುರ ಧರಿಸಿದ್ದ ಪಾರಿವಾಳವನ್ನು ಹಿಡಿದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...