alex Certify Suryayaan : ಚಂದ್ರನ ಬಳಿಕ `ಸೂರ್ಯ ಶಿಕಾರಿ’ಗೆ ಹೊರಟ ಇಸ್ರೋ : `ಆದಿತ್ಯ ಎಲ್-1’ ಉಡಾವಣೆಗೆ ಬಿಗ್ ಪ್ಲಾನ್! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Suryayaan : ಚಂದ್ರನ ಬಳಿಕ `ಸೂರ್ಯ ಶಿಕಾರಿ’ಗೆ ಹೊರಟ ಇಸ್ರೋ : `ಆದಿತ್ಯ ಎಲ್-1’ ಉಡಾವಣೆಗೆ ಬಿಗ್ ಪ್ಲಾನ್!

ನವದೆಹಲಿ : ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಇದೀಗ ಸೂರ್ಯಯಾನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2 ರಂದು ಸೌರನೌಕೆ ಆದಿತ್ಯ-ಎಲ್1 ಉಡಾವಣೆಗೆ ಸಿದ್ಧತೆ ನಡೆಸಿದೆ.

ಇಸ್ರೋ ಈಗಾಗಲೇ ಆದಿತ್ಯ-ಎಲ್ 1 ಸಿದ್ಧಪಡಿಸಿದ್ದು, ಸೌರ ಕರೊನ ಎಂದು ಕರೆಯುವ ಸೂರ್ಯನ ಹೊರ ವಾತಾವರಣ ಹಾಗೂ ಸೀಟು ಎಂದು ಗುರುತಿಸುವ ಸೌರ ಬಿರುಗಾಳಿ ರಹಸ್ಯೆ ಅಧ್ಯಯನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2 ರಂದೇ ನೌಕೆ ಉಡಾವಣೆ ಆಗುವ ಸಾಧ್ಯತೆ ಇದೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲ್ಯಾಗ್ರೇಂಜಿಯನ್ ಪಾಯಿಂಟ್ ನಲ್ಲಿ ಆದಿತ್ಯ ನೆಲೆ ನಿಂತು ಸೂರ್ಯನ ಅಧ್ಯಯನ ಮಾಡಲಿದೆ ಇಸ್ರೋ ತಿಳಿಸಿದೆ.

ಆದಿತ್ಯ ಎಲ್-1 ಉಡಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಇಸ್ರೋ ವಿಜ್ಞಾನಿಗಳು, ಬಹುತೇಕ ಸೆಪ್ಟೆಂಬರ್ 2 ರಂದೇ ಆದಿತ್ಯ ಎಲ್-1 ಉಡಾವಣೆ ಮಾಡುವ ಸಾಧ್ಯತೆ ಇದ್ದು, ಇಂದು ಅಥವಾ ನಾಳೆ ಅಧಿಕೃತ ದಿನಾಂಕ ಘೋಷಣೆಯಾಗಲಿದೆ. ಸೂರ್ಯಯಾನ ಮೀಷನ್ ಮೂಲಕ ಸೂರ್ಯನ ಕುರಿತು ಇಸ್ರೋ ಅಧ್ಯಯನ ನಡೆಸಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...