alex Certify ವಿವಾಹಿತೆಯೊಂದಿಗಿದ್ದಾಗಲೇ ಸಿಕ್ಕಿಬಿದ್ದ ಪತಿ, ಲಾಡ್ಜ್ ಗೆ ಬಂದ ಪತ್ನಿಯಿಂದ ರಸ್ತೆಯಲ್ಲೇ ರಂಪಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹಿತೆಯೊಂದಿಗಿದ್ದಾಗಲೇ ಸಿಕ್ಕಿಬಿದ್ದ ಪತಿ, ಲಾಡ್ಜ್ ಗೆ ಬಂದ ಪತ್ನಿಯಿಂದ ರಸ್ತೆಯಲ್ಲೇ ರಂಪಾಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಲಾಡ್ಜ್ ನಲ್ಲಿ ವಿವಾಹಿತ ಬೇರೆ ಮಹಿಳೆಯೊಂದಿಗೆ ಸಿಕ್ಕಿ ಬಿದ್ದ ಪತಿಯನ್ನು ಆತನ ಪತ್ನಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸುಳ್ಯದ ಗಾಂಧಿನಗರದ ಲಾಡ್ಜ್ ಗೆ ಬಂದು ರಂಪಾಟ ಮಾಡಿದ್ದಾರೆ.

ಡಿಸೆಂಬರ್ 11ರಂದು ಘಟನೆ ನಡೆದಿದೆ. ಪತಿ ವಿವಾಹಿತ ಬೇರೆ ಯುವತಿಯೊಂದಿಗೆ ಲಾಡ್ಜ್ ನಲ್ಲಿ ತಂಗಿರುವುದನ್ನು ತಿಳಿದ ಆತನ ಪತ್ನಿ ಲಾಡ್ಜ್ ಸಮೀಪ ಬಂದಿದ್ದಾರೆ. ಇದನ್ನು ತಿಳಿದ ಆತ ಯುವತಿಯೊಂದಿಗೆ ಹೊರಗೆ ಬಂದಿದ್ದು, ಅಲ್ಲೇ ಇದ್ದ ಪತ್ನಿ ರಸ್ತೆಯಲ್ಲೇ ರಂಪಾಟ ಮಾಡಿದ್ದಾರೆ. ಇಬ್ಬರನ್ನು ತರಾಟೆಗೆ ತೆಗೆದುಕೊಂಡು ಎಳೆದಾಡಿದ್ದಾರೆ.

ಗಲಾಟೆ ಹೆಚ್ಚಾಗುತ್ತಿದ್ದಂತೆ ನೂರಾರು ಜನ ಜಮಾಯಿಸಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನು ಠಾಣೆಗೆ ಕರೆಕೊಂಡು ಹೋಗಿ ವಿಚಾರಣೆ ನಡೆಸಿ ಕಳುಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...