alex Certify ಆಯುಧ ಪೂಜೆ ದಿನವೇ ಘೋರ ದುರಂತ: ಕಾರ್ ಡಿಕ್ಕಿ: ಸ್ಕೂಟಿಯಲ್ಲಿದ್ದ ಅಣ್ಣ, ತಂಗಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯುಧ ಪೂಜೆ ದಿನವೇ ಘೋರ ದುರಂತ: ಕಾರ್ ಡಿಕ್ಕಿ: ಸ್ಕೂಟಿಯಲ್ಲಿದ್ದ ಅಣ್ಣ, ತಂಗಿ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಎಲಿಮಲೆ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅಣ್ಣ, ತಂಗಿ ಮೃತಪಟ್ಟಿದ್ದಾರೆ.

ಅಣ್ಣ ನಿಶಾಂತ್, ತಂಗಿ ಮೋಕ್ಷಾ ಮೃತಪಟ್ಟ ದುರ್ದೈವಿಗಳು. ಬಾಜಿನಡ್ಕ ನಿವಾಸಿಗಳಾದ ನಿಶಾಂತ್ ಮತ್ತು ಮೋಕ್ಷಾ ಸ್ಕೂಟಿಯಲ್ಲಿ ಎಲಿಮಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಜಬಳೆಯಲ್ಲಿ ಕಾರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ನಿಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮೋಕ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸುಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...