alex Certify ‘ಆದಿತ್ಯ ಎಲ್-1′ ನೌಕೆ ಉಡಾವಣೆ ಯಶಸ್ವಿ : ‘ISRO’ ವಿಜ್ಞಾನಿಗಳಿಗೆ ಸಿಎಂ ಸಿದ್ದರಾಮಯ್ಯ, HDK ಅಭಿನಂದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆದಿತ್ಯ ಎಲ್-1′ ನೌಕೆ ಉಡಾವಣೆ ಯಶಸ್ವಿ : ‘ISRO’ ವಿಜ್ಞಾನಿಗಳಿಗೆ ಸಿಎಂ ಸಿದ್ದರಾಮಯ್ಯ, HDK ಅಭಿನಂದನೆ

ಭಾರತವು ಸೂರ್ಯ ಮಿಷನ್ ಆದಿತ್ಯ -ಎಲ್ 1 ಸೌರ ನೌಕೆಯನ್ನು ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿ ಉಡಾವಣೆಯಾಗಿದೆ.

ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ   ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ  ಟ್ವೀಟ್ ಮಾಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸೂರ್ಯನ ಅಧ್ಯಯನ ನಡೆಸುವ ಆದಿತ್ಯ ಎಲ್1 ಉಪಗ್ರಹದ ಯಶಸ್ವಿ ಉಡಾವಣೆಗೈದಿರುವ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ತುಂಬುಹೃದಯದ ಅಭಿನಂದನೆಗಳು. ಇದರೊಂದಿಗೆ ಸೂರ್ಯನ ಅಧ್ಯಯನ ನಡೆಸುವ ಇಸ್ರೋ ವಿಜ್ಞಾನಿಗಳ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರೆತಿದ್ದು, ಈ ಯೋಜನೆಯ ಮುಂದಿನ ಎಲ್ಲಾ ಹಂತಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಚಂದ್ರಯಾನ -3 ರ ಯಶಸ್ಸಿನ ನಂತರ, ಭಾರತವು ಸೂರ್ಯ ಮಿಷನ್ ಆದಿತ್ಯ -ಎಲ್ 1 ಸೌರನೌಕೆ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿ ಉಡಾವಣೆಯಾಗಿದೆ.

ಮಾಜಿ ಸಿಎಂ ಹೆಚ್ಡಿಕೆ ಅಭಿನಂದನೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಕ್ರಮಗಳ ಸರಮಾಲೆಯನ್ನೇ ಸೃಷ್ಟಿಸುತ್ತಿರುವ @isro  ಸೂರ್ಯನ ಅಧ್ಯಯನಕ್ಕೆ ಆದಿತ್ಯ L-1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ನಮ್ಮೆಲ್ಲಾ ಬಾಹ್ಯಾಕಾಶ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಪರಿಶ್ರಮ, ಬದ್ಧತೆಯನ್ನು ನಾವೆಲ್ಲರೂ ಗೌರವಿಸಿ ಸ್ಮರಿಸೋಣ ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...