alex Certify ತಡೆರಹಿತ ʼಪಿಂಚಣಿʼಗಾಗಿ ಡಿಜಿಟಲ್ ಜೀವನ ಪ್ರಮಾಣ ಪತ್ರ ಪಡೆಯುವುದು ಈಗ ಇನ್ನಷ್ಟು ಸರಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡೆರಹಿತ ʼಪಿಂಚಣಿʼಗಾಗಿ ಡಿಜಿಟಲ್ ಜೀವನ ಪ್ರಮಾಣ ಪತ್ರ ಪಡೆಯುವುದು ಈಗ ಇನ್ನಷ್ಟು ಸರಳ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಓ) 35 ಲಕ್ಷ ಚಂದಾದಾರರಿಗೆ ಮುಕ್ತಿ ನೀಡುವ ಬೆಳವಣಿಗೆಯೊಂದರಲ್ಲಿ, ಇದೀಗ ನಿಮ್ಮ ಜೀವ ಪ್ರಮಾಣ ಪತ್ರವನ್ನು ಡಿಜಿಟಲ್‌ ಆಗಿ ಸಲ್ಲಿಸಲು ಇಪಿಎಫ್‌ಓ ಅನುವು ಮಾಡಿಕೊಟ್ಟಿದೆ.

ಆಧಾರ್‌‌ ಚಾಲಿತ ಬಯೋಮೆಟ್ರಿಕ್ ಖಾತ್ರಿ ವ್ಯವಸ್ಥೆ ಮೂಲಕ ನಿಮ್ಮ ಜೀವ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಿಂಚಣಿದಾರರು ಹೊಸ ವ್ಯವಸ್ಥೆಯ ಪ್ರಯೋಜನ ಪಡೆಯಬಹುದಾಗಿದೆ.

SHOCKING NEWS: ಕಲುಷಿತ ನೀರಿಂದ ಸರಣಿ ಸಾವು; ಜೀವ ಉಳಿಸಿಕೊಳ್ಳಲು ಭಯದಿಂದ ಊರು ತೊರೆದ ಗ್ರಾಮಸ್ಥರು

ಜೀವನ ಪ್ರಮಾಣ ಅರ್ಜಿಯನ್ನು ಡೌನ್ಲೋಡ್ ಮಾಡುವುದು ಹೇಗೆ ?

1. https://jeevanpramaan.gov.in ಲಿಂಕ್‌ಗೆ ಭೇಟಿ ನೀಡಿ.

2. ಇ-ಮೇಲ್ ವಿಳಾಸ, ಕ್ಯಾಪ್ಚಾ ಒದಗಿಸಿ, ‘I agree to Download’ ಮೇಲೆ ಕ್ಲಿಕ್ ಮಾಡಿ.

3. ನಿಮ್ಮ ಇ-ಮೇಲ್ ವಿಳಾಸಕ್ಕೆ ಬರುವ ಓಟಿಪಿ ಲಗತ್ತಿಸುತ್ತಲೇ, ಡೌನ್ಲೋಡ್‌ ಪುಟ ಕಾಣಸಿಗುತ್ತದೆ. ಅಲ್ಲಿ ‘Download For Windows OS’ ಮೇಲೆ ಕ್ಲಿಕ್ ಮಾಡಿ.

ತಂದೆ ಗೆಲುವಿಗಾಗಿ ಪ್ರಾರ್ಥಿಸಿದ ಜೀವಾ ಧೋನಿ: ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಮುದ್ದಾದ ಫೋಟೋ

4. ಡೌನ್ಲೋಡ್ ಲಿಂಕ್‌ ಅನ್ನು ನಿಮ್ಮ ಇ-ಮೇಲ್ ವಿಳಾಸದಲ್ಲಿ ಸ್ವೀಕರಿಸುವಿರಿ. ಇದನ್ನು ಒಮ್ಮೆ ಮಾತ್ರ ಕ್ಲಿಕ್ ಮಾಡಬಹುದಾಗಿರುತ್ತದೆ ಹಾಗೂ ನಂತರ ನಾಪತ್ತೆಯಾಗುತ್ತದೆ.

5. ಜೀವನ ಪ್ರಮಾಣ ಅರ್ಜಿ ಹೊಂದಿರುವ ಜ಼ಿಪ್ ಫೈಲ್‌ ಒಂದು ಡೌನ್ಲೋಡ್ ಆಗುತ್ತದೆ. ಅದನ್ನು ಅನ್‌ಜ಼ಿಪ್ ಮಾಡಿ, ಬಳಿಕ ‘client installation document’ನಲ್ಲಿ ಕೊಟ್ಟಿರುವ ಸೂಚನೆಗಳನ್ನು ಪಾಲಿಸಿ.

ಮೊಬೈಲ್ ಅಪ್ಲಿಕೇಶನ್ ಮೂಲಕ ಜೀವನ ಪ್ರಮಾಣ ಪತ್ರ ಡೌನ್ಲೋಡ್ ಮಾಡುವುದು ಹೇಗೆ?

1. https://jeevanpramaan.gov.in ಲಿಂಕ್‌ಗೆ ಭೇಟಿ ಕೊಟ್ಟು, ‘Download’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

2. ಇ-ಮೇಲ್ ವಿಳಾಸ, ಕ್ಯಾಪ್ಚಾಗಳನ್ನು ನಮೂದಿಸಿ, ‘I agree to Download’ ಮೇಲೆ ಕ್ಲಿಕ್ ಮಾಡಿ.

3. ನಿಮ್ಮ ಇ-ಮೇಲ್ ವಿಳಾಸಕ್ಕೆ ಬಂದ ಒಟಿಪಿ ನಮೂದಿಸಿದ ಬಳಿಕ ‘Mobile App download’ ಮೇಲೆ ಕ್ಲಿಕ್ ಮಾಡಿ.

4. ಡೌನ್ಲೋಡ್ ಲಿಂಕ್‌ಅನ್ನು ನಿಮ್ಮ ಇ-ಮೇಲ್ ವಿಳಾಸದಲ್ಲಿ ಸ್ವೀಕರಿಸುವಿರಿ. ಇದನ್ನು ಒಮ್ಮೆ ಮಾತ್ರ ಕ್ಲಿಕ್ ಮಾಡಬಹುದಾಗಿರುತ್ತದೆ ಹಾಗೂ ನಂತರ ನಾಪತ್ತೆಯಾಗುತ್ತದೆ.

ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ ಕೋತಿರಾಯ..!

ಭಾರತೀಯ ಅಂಚೆ ಮೂಲಕ ಡಿಜಿಟಲ್ ಜೀವನ ಪ್ರಮಾಣಪತ್ರ ಸ್ವೀಕರಿಸಲು ಗ್ರಾಹಕರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು ಅಥವಾ ಗ್ರಾಮೀಣ ಅಂಚೆ ಸೇವಕರ ಬಳಿ ಮನವಿ ಮುಂದಿಡಬಹುದು. ಮನೆಬಾಗಿಲಿಗೆ ಈ ಸೇವೆ ಸ್ವೀಕರಿಸಲು ನೀವು http://ccc.cept.gov.in/covid/request.aspx. ಲಿಂಕ್‌ಗೆ ಭೇಟಿ ನೀಡಬೇಕು.

ಸಾರ್ವಜನಿಕ ಸ್ವಾಮ್ಯದ 12 ಬ್ಯಾಂಕುಗಳನ್ನು ಪಿಂಚಣಿ ಹಾಗೂ ಪಿಂಚಣಿದಾರರ ಇಲಾಖೆಯು ಈ ಸೇವೆಗೆಂದು ನೇಮಕ ಮಾಡಿಕೊಂಡಿದೆ. ದೇಶದ 100ಕ್ಕೂ ಹೆಚ್ಚು ನಗರಗಳಲ್ಲಿ ಜೀವನ ಪ್ರಮಾಣ ಪತ್ರಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ಬ್ಯಾಂಕಿಂಗ್‌ ಅನ್ನು ಜನಸ್ನೇಹಿಯಾಗಿಸುವ ಸುಧಾರಣೆಗಳ ಭಾಗವಾಗಿ, ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಅನುಸಾರವಾಗಿ, ವಿಡಿಯೋ ಆಧರಿತ ಗುರುತಿನ ಪ್ರಕ್ರಿಯೆಯ ಮೂಲಕ ಜೀವನ ಪ್ರಮಾಣ ಪತ್ರ ವಿತರಿಸುವ ಪ್ರಕ್ರಿಯೆಯನ್ನು ಬ್ಯಾಂಕುಗಳು ಕೈಗೆತ್ತಿಕೊಳ್ಳಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...