alex Certify ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ ಕೋತಿರಾಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ ಕೋತಿರಾಯ..!

ಹಣ ಅಂದರೆ ಹೆಣವೂ ಬಾಯಿಬಿಡುತ್ತದೆ ಎಂಬ ಗಾದೆ ಮಾತಿದೆ. ಆದರೆ ಈ ಸ್ಟೋರಿಯನ್ನು ಓದಿದ ಮೇಲೆ ನೀವು ಹಣ ಅಂದರೆ ಕೋತಿಯೂ ಬಾಯಿಬಿಡುತ್ತೆ ಎಂದು ಬದಲಾಯಿಸಿಕೊಳ್ಳಬಹುದು.

BIG NEWS: ಕಳೆದ 28 ಗಂಟೆಗಳಿಂದ ನನ್ನನ್ನು ಕಸ್ಟಡಿಯಲ್ಲಿಟ್ಟಿದ್ದೀರಿ; ‘ಅನ್ನದಾತನನ್ನು ತುಳಿದ ಈ ವ್ಯಕ್ತಿಯನ್ನು ಯಾಕಿನ್ನು ಬಂಧಿಸಿಲ್ಲ’; ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ಏಕೆಂದರೆ ಮಧ್ಯಪ್ರದೇಶದಲ್ಲಿ ಇಂತಹದ್ದೊಂದು ಘಟನೆ ವರದಿಯಾಗಿದೆ. 1 ಲಕ್ಷ ರೂಪಾಯಿಯನ್ನು ಸುತ್ತಿಟ್ಟಿದ್ದ ಟವೆಲ್​ನ್ನೇ ಕೋತಿಯು ಎಗರಿಸಿದೆ.

ಮಧ್ಯ ಪ್ರದೇಶದ ಜಬಲಾಪುರ ಜಿಲ್ಲೆಯಲ್ಲಿ ಸಣ್ಣ ರಸ್ತೆಯೊಂದರಲ್ಲಿ ಟ್ರಾಫಿಕ್​ ಜಾಮ್​ ಇದ್ದಿದ್ದರಿಂದ ಆಟೋ ಮಾರ್ಗ ಮಧ್ಯದಲ್ಲೇ ನಿಂತಿತ್ತು. ಈ ಆಟೋದಲ್ಲಿದ್ದ ಹಣವನ್ನು ಕೋತಿ ಎಗರಿಸಿದೆ.

ಬೆರಗಾಗಿಸುತ್ತೆ ಕಳ್ಳತನದಿಂದಲೇ ಕೋಟ್ಯಾಧೀಶನಾದವನ ಐಷಾರಾಮಿ ಜೀವನ…!

ಕಟಾಬ್​ ಘಾಟ್​ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಆಟೋರಿಕ್ಷಾದಲ್ಲಿ ಇಬ್ಬರ ಜೊತೆಯಲ್ಲಿ ಹಣದ ಮಾಲೀಕ ಕೂಡ ಆಟೋದಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಟ್ರಾಫಿಕ್ ಜಾಮ್​ ಉಂಟಾಗಿದ್ದರಿಂದ ಮೂವರು ಆಟೋದಿಂದ ಇಳಿದಿದ್ದರು. ಈ ವೇಳೆ ಆಟೋದಲ್ಲಿಯೇ ಟವೆಲ್​ ಒಂದರಲ್ಲಿ 1 ಲಕ್ಷ ರೂಪಾಯಿಗಳನ್ನು ಸುತ್ತಿ ಇಡಲಾಗಿತ್ತು. ಟವೆಲ್​ ಹಿಡಿದುಕೊಂಡ ಕೋತಿಯು ಕೂಡಲೇ ಮರ ಏರಿದೆ. ಹಾಗೂ 1 ಲಕ್ಷ ರೂಪಾಯಿ ಹಣವನ್ನು ಸುತ್ತೆಲ್ಲ ಚೆಲ್ಲಿದೆ. ಹೇಗೋ ಮಾಡಿ ಮಾಲೀಕ 56 ಸಾವಿರ ರೂಪಾಯಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಹಣವನ್ನು ಕಳೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...