alex Certify ಕೊರೊನಾ ಸೈಡ್ ಎಫೆಕ್ಟ್: ದಂಪತಿ ಮಧ್ಯೆ ಡಿಶುಂ ಡಿಶುಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೈಡ್ ಎಫೆಕ್ಟ್: ದಂಪತಿ ಮಧ್ಯೆ ಡಿಶುಂ ಡಿಶುಂ

ಕೊರೊನಾ ನಂತ್ರ ವಿಶ್ವದಾದ್ಯಂತ ಅನೇಕ ಸಮಸ್ಯೆ ಎದುರಾಗಿದೆ. ಕೊರೊನಾ ಜನರ ಉದ್ಯೋಗ, ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಸೋಂಕಿನಿಂದಾಗಿ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಯುಎಸ್ ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಕೊರೊನಾ ದಂಪತಿ ಮಧ್ಯೆ ಸಾಕಷ್ಟು ಬದಲಾವಣೆ ತಂದಿದೆ.

ದೇಶಾದ್ಯಂತ ದಂಪತಿಯ ಕೋಪ ಶೇಕಡಾ 6 ರಿಂದ 8 ಪಟ್ಟು ಹೆಚ್ಚಾಗಿದೆ. ಒಬ್ಬರಿಗೊಬ್ಬರು ದೈಹಿಕವಾಗಿ ನೋಯಿಸುವ ಅಥವಾ ವಸ್ತುಗಳನ್ನು ಪರಸ್ಪರ ಎಸೆಯುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವರ್ತನೆ ಕೊರೊನಾ ನಂತ್ರ ಹೆಚ್ಚಾಗಿದೆ. ಕೊರೊನಾ ಉದ್ವಿಗ್ನತೆ ಇದಕ್ಕೆ ಕಾರಣ ಎನ್ನಲಾಗ್ತಿದೆ.

ಸೈಕಾಲಜಿ ಆಫ್ ವೈಲೆನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಾಂಕ್ರಾಮಿಕ ರೋಗವು ಪ್ರಾರಂಭವಾಗುವ ಒಂದು ವರ್ಷದ ಮೊದಲು ಹಾಗೂ ಲಾಕ್ ಡೌನ್ ನಂತ್ರ ದಂಪತಿ ಮಧ್ಯೆ ಆದ ಬದಲಾವಣೆಯನ್ನು ಗಮನಿಸಲಾಗಿದೆ. ಲಾಕ್ ಡೌನ್ ನಂತ್ರ ದಂಪತಿ ಮಧ್ಯೆ ಗಲಾಟೆ ಹೆಚ್ಚಾಗಿದೆ. ತಳ್ಳುವುದು, ಹೊಡೆಯುವುದು, ಒದೆಯುವುದು ಹೆಚ್ಚಾಗ್ತಿದೆ. ಇದಕ್ಕೆ ಮುಖ್ಯ ಕಾರಣ ಒತ್ತಡವೆಂದು ತಜ್ಞರು ಹೇಳಿದ್ದಾರೆ.

ಏಪ್ರಿಲ್ 2020 ರಲ್ಲಿ ಅಮೆರಿಕದಲ್ಲಿ ಲಾಕ್‌ಡೌನ್ ಆರಂಭವಾದಾಗ ಸಂಶೋಧಕರು 510 ಜನರ ಮೇಲೆ ಈ ಅಧ್ಯಯನವನ್ನು ನಡೆಸಿದ್ದಾರೆ. ಈ ಅಧ್ಯಯನದಲ್ಲಿ, ಸಾಂಕ್ರಾಮಿಕ ಸಮಯದಲ್ಲಿ ಮತ್ತು ಮೊದಲು ಅವರ ಜೀವನದಲ್ಲಾದ ಬದಲಾವಣೆ ಬಗ್ಗೆ ಕೇಳಲಾಗಿದೆ. ಲಾಕ್ ಡೌನ್ ಸಮಯದಲ್ಲಿ ತುಂಬಾ ಒತ್ತಡ ಹೆಚ್ಚಾಗಿತ್ತು. ಹಿಂಸೆ ಹೆಚ್ಚಾಗಿದೆ ಎಂದು ಅನೇಕ ಜನರು ಹೇಳಿದ್ದಾರೆ.ಆಲ್ಕೊಹಾಲ್ ಸೇವಿಸುವ ಜನರಲ್ಲಿ ಆಕ್ರಮಣತೆ ಮತ್ತು ಕೋಪ ಮತ್ತಷ್ಟು ಹೆಚ್ಚಾಗಿತ್ತು. ಅತಿಯಾದ ಮದ್ಯಪಾನವು ಆಕ್ರಮಣಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...