alex Certify ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್: ಬಸ್ ಪಾಸ್ ಅವಧಿ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್: ಬಸ್ ಪಾಸ್ ಅವಧಿ ವಿಸ್ತರಣೆ

ರಾಯಚೂರು: 2021-22 ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅವಧಿಯನ್ನು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

ಡಿಪ್ಲೋಮ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನಲ್ಲಿ ವಿತರಿಸಿರುವ ಪಾಸ್ ನ ಚಾಲ್ತಿ ಅವಧಿಯನ್ನು ನವೆಂಬರ್‌  ಮಾಹೆಯವರೆಗೆ ವಿಸ್ತರಿಸಲಾಗಿದೆ.

ಬಿಎಡ್ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ 2021ನೇ ಸಾಲಿನಲ್ಲಿ ವಿತರಿಸಿರುವ ಪಾಸಿನ ಚಾಲ್ತಿ ಅವಧಿಯನ್ನು ನವೆಂಬರ್‌ ಮಾಹೆಯವರೆಗೆ ವಿಸ್ತರಿಸಲಾಗಿದೆ.

ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ನಡೆಯುತ್ತಿದ್ದಲ್ಲಿ, 2020-21ನೇ ಸಾಲಿನಲ್ಲಿ ವಿತರಿಸಿರುವ ಪಾಸ್ ಗಳ ಚಾಲ್ತಿ ಅವಧಿಯನ್ನು ನವೆಂಬರ್‌ ಮಾಹೆಯವರೆಗೆ ವಿಸ್ತರಿಸಲಾಗಿದೆ.

ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ ಕಾಲೇಜುಗಳ ವಿಳಾಸವನ್ನು ಆನ್‌ಲೈನ್ ಮುಖಾಂತರ ನಮೂದಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕ.ಕ.ರ.ಸಾ.ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...