alex Certify ಬೀದಿ ನಾಯಿ ಕಚ್ಚಿದರೆ ಆಹಾರ ಕೊಟ್ಟವರೇ ಹೊಣೆ: ಸುಪ್ರೀಂ ಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿ ನಾಯಿ ಕಚ್ಚಿದರೆ ಆಹಾರ ಕೊಟ್ಟವರೇ ಹೊಣೆ: ಸುಪ್ರೀಂ ಕೋರ್ಟ್

ನವದೆಹಲಿ: ಬೀದಿ ನಾಯಿಗಳು ಕಚ್ಚಿದರೆ ಆಹಾರ ಹಾಕಿದವರೇ ಹೊಣೆಗಾರರು. ಅವರಿಂದಲೇ ನಾಯಿಗೆ ಲಸಿಕೆ ಹಾಕಿಸಬಹುದು ಎಂದು ಬೀದಿ ನಾಯಿಗಳ ಹಾವಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ನಾಯಿಗಳು ಕಚ್ಚಿದರೆ ಅದಕ್ಕೆ ಆಹಾರ ಹಾಕುವವರನ್ನೇ ಹೊಣೆಗಾರರನ್ನಾಗಿ ಮಾಡಬೇಕಾದೀತು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗಳ ವೈದ್ಯಕೀಯ ವೆಚ್ಚವನ್ನು ಆಹಾರ ಹಾಕುವವರು ಭರಿಸಬೇಕು. ಜೊತೆಗೆ ಅವುಗಳಿಗೆ ಲಸಿಕೆ ಹಾಕುವ ಜವಾಬ್ದಾರಿಯನ್ನು ಹೊರಬೇಕು. ನಾಯಿಗಳನ್ನು ಪ್ರೀತಿಸಿದರೆ ಸಾಲದು, ಅವುಗಳ ಬಗ್ಗೆ ಕಾಳಜಿ ತೋರಬೇಕು. ಬೀದಿ ನಾಯಿಗಳು ಅಮಾಯಕರಿಗೆ ಹಾನಿ ಮಾಡುವುದನ್ನು ಸಹಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ಪೀಠ ಹೇಳಿದೆ.

ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಕುರಿತು ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ರೀತಿ ಅಭಿಪ್ರಾಯಪಟ್ಟಿದೆ. ಜನರ ಸುರಕ್ಷತೆ ಪ್ರಾಣಿಗಳ ಹಕ್ಕಿನ ನಡುವೆ ಸಮತೋಲನ ಅಗತ್ಯವಾಗಿದೆ. ಬೀದಿ ನಾಯಿ ಸಮಸ್ಯೆಗೆ ಪರಿಹಾರ ಸಿಗಬೇಕು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...