alex Certify ʼಅಮರಿಂದರ್‌ ಸಿಂಗ್‌ʼ ಹೆಸರಿನ ಕಾರಣಕ್ಕೆ ಫುಟ್ಬಾಲ್ ಆಟಗಾರನ ಫಜೀತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಮರಿಂದರ್‌ ಸಿಂಗ್‌ʼ ಹೆಸರಿನ ಕಾರಣಕ್ಕೆ ಫುಟ್ಬಾಲ್ ಆಟಗಾರನ ಫಜೀತಿ

ಚಂಡೀಗಢ: ನನ್ನನ್ನು ಟ್ಯಾಗ್ ಮಾಡುವುದನ್ನು ನಿಲ್ಲಿಸಿ. ನಾನು ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಲ್ಲ ಎಂದು ಭಾರತೀಯ ಫುಟ್ಬಾಲ್ ತಂಡದ ಗೋಲ್ ಕೀಪರ್ ಅಮರಿಂದರ್ ಸಿಂಗ್ ಅವರು ಹೇಳಿದ್ದಾರೆ.

ಭಾರತೀಯ ಫುಟ್ಬಾಲ್ ತಂಡದ ಗೋಲ್ ಕೀಪರ್ ಅಮರಿಂದರ್ ಸಿಂಗ್ ಅವರು ಪಂಜಾಬ್ ನ ಮಾಜಿ ಮುಖ್ಯಮಂತ್ರಿಯ ಹೆಸರನ್ನೇ ಹೊಂದಿದ್ದಾರೆ. ಹೀಗಾಗಿ ಹಲವಾರು ಮಂದಿ ಟ್ವೀಟ್ ಮಾಡುವಾಗ ತಪ್ಪಾಗಿ ಈ ಆಟಗಾರನನ್ನು ಟ್ಯಾಗ್ ಮಾಡಿದ್ದಾರೆ. ಆದ್ದರಿಂದ ಗೊಂದಲವನ್ನು ಬಗೆಹರಿಸಲು ಅವರು ಸ್ಪಷ್ಟೀಕರಣ ನೀಡಿದ್ದಾರೆ. ಮಾಧ್ಯಮಗಳು ಹಾಗೂ ಜನರು ತಮ್ಮನ್ನು ಟ್ಯಾಗ್ ಮಾಡದಂತೆ ಟ್ವೀಟ್ ಮುಖಾಂತರ ವಿನಂತಿಸಿದ್ದಾರೆ.

ಟ್ವೀಟ್ ನಲ್ಲಿ ಫುಟ್ಬಾಲ್ ಆಟಗಾರ, “ಆತ್ಮೀಯ ನ್ಯೂಸ್ ಮೀಡಿಯಾ, ಪತ್ರಕರ್ತರು, ನಾನು ಅಮರಿಂದರ್ ಸಿಂಗ್, ಭಾರತೀಯ ಫುಟ್ಬಾಲ್ ತಂಡದ ಗೋಲ್ ಕೀಪರ್. ಪಂಜಾಬ್ ರಾಜ್ಯದ ಮಾಜಿ ಮುಖ್ಯಮಂತ್ರಿಯಲ್ಲ. ದಯವಿಟ್ಟು ನನ್ನನ್ನು ಟ್ಯಾಗ್ ಮಾಡುವುದನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...