alex Certify BREAKING NEWS: ಇಡೀ ಪಕ್ಷವನ್ನೇ ವಿಲೀನಗೊಳಿಸಿ ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಇಡೀ ಪಕ್ಷವನ್ನೇ ವಿಲೀನಗೊಳಿಸಿ ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್

ನವದೆಹಲಿ: ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರು ಹೊಸದಾಗಿ ಆರಂಭಿಸಿದ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ.

ಕಾಂಗ್ರೆಸ್‌ನಿಂದ ಅನೌಪಚಾರಿಕವಾಗಿ ನಿರ್ಗಮಿಸಿದ 10 ತಿಂಗಳ ನಂತರ, ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸೋಮವಾರ ನವದೆಹಲಿಯಲ್ಲಿ ಕೇಸರಿ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

80 ವರ್ಷದ ಹಿರಿಯ ರಾಜಕಾರಣಿ, ಕಳೆದ ವರ್ಷ ನವೆಂಬರ್‌ನಲ್ಲಿ ಆಗಿನ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ಅವರೊಂದಿಗಿನ ಅಧಿಕಾರದ ಕಲಹದ ನಡುವೆ ಕಾಂಗ್ರೆಸ್ ತೊರೆದರು, ಅವರು ಹೊಸದಾಗಿ ರಚಿಸಲಾದ ಪಂಜಾಬ್ ಲೋಕ ಕಾಂಗ್ರೆಸ್(PLC) ಅನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು.

ಅಮರಿಂದರ್ ಸಿಂಗ್ ಅವರ ಪುತ್ರ ರಣೀಂದರ್ ಸಿಂಗ್ ಮತ್ತು ಪುತ್ರಿ ಜೈ ಇಂದರ್ ಕೌರ್, ಇತರ ನಾಯಕರು ಕೂಡ ಬಿಜೆಪಿ ಸೇರ್ಪಡೆಗೊಂಡರು,

ಕಳೆದ ವರ್ಷ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಸಿಂಗ್ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಅವರ ಪಕ್ಷವು ಚುನಾವಣೆಯಲ್ಲಿ ಯಾವುದೇ ಸ್ಥಾನ ಗಳಿಸಲಿಲ್ಲ. 1992 ರಲ್ಲಿ ಅಕಾಲಿದಳದಿಂದ ದೂರವಾಗಿ ಶಿರೋಮಣಿ ಅಕಾಲಿದಳ(ಪಂಥಿಕ್) ರಚಿಸಿದಾಗ ಸಿಂಗ್ ಕೊನೆಯ ಬಾರಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದ್ದರು. ಅವರು ಅಂತಿಮವಾಗಿ 1998 ರಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...