alex Certify ಪ್ರಾಥಮಿಕ, ಪ್ರೌಢಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯಗಳ ನಿರ್ವಹಣೆಗೆ ಅನುದಾನ ಬಿಡುಗಡೆ : ರಾಜ್ಯ ಸರ್ಕಾರ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಥಮಿಕ, ಪ್ರೌಢಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯಗಳ ನಿರ್ವಹಣೆಗೆ ಅನುದಾನ ಬಿಡುಗಡೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು 2023-24 ನೇ ಸಾಲಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯಗಳ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

2023-24 ನೇ ಸಾಲಿನ ಆಯವ್ಯಯದಲ್ಲಿ ಘೋಷಿತವಾದಂತೆ ಕುಡಿಯುವ ನೀರು ಮತ್ತು ಶೌಚಾಲಯ ನಿರ್ವಹಣೆಗಾಗಿ ಮತ್ತು ಶಾಲೆಯ ಇತರೇ ನಿರ್ವಹಣೆಗೆ ಖರ್ಚು ಭರಿಸಲು ಈಗಾಗಲೇ ಅನುದಾನ ರೂ 4352.47 ಲಕ್ಷಗಳನ್ನು ಜಿಲ್ಲಾವಾರು ಮತ್ತು ತಾಲ್ಲೂಕುವಾರು ಅನುದಾನ ಹಂಚಿಕೆ ಮಾಡಿ ರಾಜ್ಯದ ಎಲ್ಲಾ ಉಪನಿರ್ದೇಶಕರು (ಆ) ರವರುಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ.

ಮುಂದುವರೆದು ಉಲ್ಲೇಖ (6)ರ ಸೂಚನೆಗಳಂತೆ ಹಾಗೂ ಈ ಕೆಳಕಂಡ ಸ್ಪಷ್ಟಿಕರಣಗಳಂತೆ ಮತ್ತು ಸೂಚನೆಗಳಂತೆ ಅನುದಾನ ಬಳಸಿಕೊಂಡು ಕೂಡಲೇ ಖರ್ಚು ಭರಿಸಲು ಸೂಚಿಸಿದೆ.

  1. ಅನುದಾನವನ್ನು ಪ್ರಥಮ ಆದ್ಯತೆಯ ಮೇರೆಗೆ ಶೌಚಾಲಯ ನಿರ್ವಹಣೆಗೆ ಬಳಸಿಕೊಳ್ಳುವುದು. ನೈರ್ಮಲ್ಯಕ್ಕೆ ಪ್ರಥಮ ಆದ್ಯತೆ ನೀಡುವುದು ನಂತರ ಉಳಿಕೆ ಅನುದಾನವನ್ನು ಉಲ್ಲೇಖ-6ರ ಸೂಚನೆಯಂತೆ ಕ್ರಮವಹಿಸುವುದು.
  2. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತಾ ಕಾರ್ಯಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವ ಕೆಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಡ್ಡಾಯವಾಗಿ ವಿದ್ಯಾರ್ಥಿಗಳನ್ನು ಇಂತಹ ಕಾರ್ಯಗಳಿಗೆ ಬಳಸದೇ ಇರುವಂತೆ ಸೂಚಿಸಿದೆ. ಈ ಸಂಬಂಧಿಸಿದಂತೆ ಉಲ್ಲೇಖ (7) ರ ಸುತ್ತೋಲೆಯಲ್ಲಿ ಸೂಚಿಸಿರುವ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಿದೆ ಮತ್ತು ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಲು ಸೂಚಿಸಿದೆ.
  3. ಡಿಡಿಓಗಳು ಇಲ್ಲದ ಸರ್ಕಾರಿ ಪ್ರೌಢಶಾಲೆಗಳಿಗೆ ಅನುದಾನವು ಉಲ್ಲೇಖ 6ರಂತೆ ಸಂಬಂಧಪಟ್ಟ ಉಪನಿರ್ದೇಶಕರು(ಆಡಳಿತ) ಇವರುಗಳಿಗೆ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಸದರಿ ಅನುದಾನವನ್ನು ಸಂಬಂಧಪಟ್ಟ ಶಾಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ DDO ಖಾತೆಗಳಿಗೆ U-Modeನಲ್ಲಿ ಬಿಡುಗಡೆ ಮಾಡಲು ತಿಳಿಸಿದೆ ಹಾಗೂ ಸಂಬಂಧಿಸಿದ ಅನುಬಂಧಗಳಂತೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೆ-2ನಲ್ಲಿ ಬಿಲ್ ಸಿದ್ದಪಡಿಸಿ ಖಜಾನೆಯಿಂದ ಅನುದಾನವನ್ನು ಸೆಳೆದು ಸಂಬಂಧಿಸಿದ ಶಾಲೆಗಳ ಜಂಟಿ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡುವುದು ಮತ್ತು ಆಯಾ ಮುಖ್ಯ ಶಿಕ್ಷಕರು ಶಾಲಾ ನಿರ್ವಹಣೆಗೆ ಸಂಬಂಧಿಸಿದ ಖರ್ಚನ್ನು ನಿಯಮಾನುಸಾರ ಭರಿಸುವುದು ಅಥವಾ ನಿರ್ವಹಣಾ ವೆಚ್ಚದ ಸಾಮಗ್ರಿಗಳನ್ನು ಪೂರೈಕೆ ಮಾಡಿದ ಮತ್ತು ನಿರ್ವಹಣಾ ಸೇವೆಯನ್ನು ಪಡೆದ ಬಗ್ಗೆ ಸಂಬಂಧಿತ ៧ជា Supplier and Service Provider में ថ ಪಾವತಿಸಲು ಸಹ ಅನುಮತಿಸಿದೆ.
  4. ಒಂದೇ ಯು ಡೈಸ್ ಸಂಖ್ಯೆಯಲ್ಲಿ 2 ರಿಂದ 3 ಶಾಲೆಗಳು ಅಥವಾ 4 ಶಾಲೆಗಳು ಇರುವುದು ಕಂಡುಬಂದಿರುತ್ತದೆ. ಅಂತಹ ಶಾಲೆಗಳಿಗೆ ಒಂದು ಶಾಲೆಯೆಂದು ಪರಿಗಣಿಸಿ ಒಟ್ಟಾರೆ ಮಕ್ಕಳ ದಾಖಲಾತಿ ಸಂಖ್ಯೆಗನುಗುಣವಾಗಿ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಕೆಳಕಂಡ ಸ್ತರಗಳಂತೆ, ಈಗಾಗಲೇ ಬಿಡುಗಡೆ ಆಗಿರುವ ಅನುದಾನಕ್ಕೆ ಶಾಲಾ ಮುಖ್ಯೋಪಾಧ್ಯಾರುಗಳು ಒಂದೇ ಯುಡೈಸ್‌ನಲ್ಲಿ ಬರುವ ಎಲ್ಲಾ ಶಾಲೆಗಳಿಗೂ ಶೇಕಡ ಸಮ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಹಂಚಿಕೆ ಮಾಡಿಕೊಂಡು ಖರ್ಚು ಭರಿಸಲು ಸೂಚಿಸಿದೆ. ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಸ್ತುವಾರಿ ವಹಿಸುವುದು ಹಾಗೂ ಸೂಕ್ತ ಮಾರ್ಗದರ್ಶನ ನೀಡುವುದು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...