alex Certify ವಯಸ್ಸಿಗೆ ಅನುಗುಣವಾಗಿ ಮಗುವಿನ ತೂಕ ಹೆಚ್ಚಾಗದಿದ್ದರೆ ಈ ಆಹಾರವನ್ನು ಕೊಡಲು ಪ್ರಾರಂಭಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಿಗೆ ಅನುಗುಣವಾಗಿ ಮಗುವಿನ ತೂಕ ಹೆಚ್ಚಾಗದಿದ್ದರೆ ಈ ಆಹಾರವನ್ನು ಕೊಡಲು ಪ್ರಾರಂಭಿಸಿ

ಮಗುವಿನ ಆರೋಗ್ಯಕರ ಬೆಳವಣಿಗೆಗಾಗಿ ವಯಸ್ಸಿಗೆ ಅನುಗುಣವಾಗಿ ತೂಕ ಹೆಚ್ಚಾಗುವುದು ಬಹಳ ಮುಖ್ಯ. ಆದರೆ ಮಕ್ಕಳು ತೆಳ್ಳಗಿರುತ್ತಾರೋ ಅಥವಾ ದಪ್ಪಗಿರುತ್ತಾರೋ ಎಂಬುದು ಕೆಲವೊಮ್ಮೆ ಅನುವಂಶಿಕತೆಯನ್ನೂ ಅವಲಂಬಿಸಿರುತ್ತದೆ. ಪೋಷಕರು ತೆಳ್ಳಗಿದ್ದರೆ  ಮಗು ಕಡಿಮೆ ತೂಕವನ್ನು ಹೊಂದಿರಬಹುದು. ಆದರೆ ಈ ಸ್ಥಿತಿಯನ್ನು ಆರೋಗ್ಯಕರ ಮತ್ತು ಸಮತೋಲಿತ ಆಹಾರದ ಮೂಲಕ ನಿಯಂತ್ರಿಸಬಹುದು.

ಕಡಿಮೆ ತೂಕವು ಮಗುವಿನ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಅಂತಹ ಮಕ್ಕಳು ಹೆಚ್ಚು ಎತ್ತರಕ್ಕೆ ಬೆಳೆಯುವುದಿಲ್ಲ. ಇದಲ್ಲದೇ ಅವರ ಕಲಿಕಾ ಸಾಮರ್ಥ್ಯ ಕೂಡ ಇತರರಿಗಿಂತ ಕಡಿಮೆಯಿರುತ್ತದೆ. ಆದಾಗ್ಯೂ ದೀರ್ಘಕಾಲದವರೆಗೆ ಕಡಿಮೆ ತೂಕವನ್ನು ಹೊಂದಿರುವ ಮಕ್ಕಳಲ್ಲಿ ಈ ರೋಗಲಕ್ಷಣಗಳು ಹೆಚ್ಚು ಗೋಚರಿಸುತ್ತವೆ. ಮಗುವಿಗೆ ಕೆಳಕಂಡ 5 ವಸ್ತುಗಳನ್ನು ತಿನ್ನಿಸುವ ಮೂಲಕ ತೂಕವನ್ನು ಹೆಚ್ಚಿಸಬಹುದು, ಆರೋಗ್ಯವನ್ನೂ ಸುಧಾರಿಸಬಹುದು.

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ 6 ಮತ್ತು ಕಾರ್ಬೋಹೈಡ್ರೇಟ್‌ಗಳು ಸೇರಿದಂತೆ ಕ್ಯಾಲೊರಿಗಳು  ಸಮೃದ್ಧವಾಗಿವೆ. ಇದು ಮಗುವಿನ ತೂಕವನ್ನು ಹೆಚ್ಚಿಸಲು ಉತ್ತಮ ಆಹಾರವಾಗಿದೆ. ಮಗುವಿಗೆ ಪ್ರತಿದಿನ ಬಾಳೆಹಣ್ಣು ತಿನ್ನಿಸಿ.

ಬೇಳೆ ಕಾಳು

ಮಗುವಿಗೆ 6 ತಿಂಗಳಾಗುತ್ತಿದ್ದಂತೆ ಬೇಳೆ ಕಾಳುಗಳನ್ನು ಬೇಯಿಸಿದ ನೀರನ್ನು ಕೊಡಲು ಪ್ರಾರಂಭಿಸಬೇಕು. ಒಂದು ವರ್ಷದ ಬಳಿಕ ನಿತ್ಯದ ಊಟದಲ್ಲಿ ಬೇಳೆಕಾಳುಗಳನ್ನು ತಪ್ಪದೇ ತಿನ್ನಿಸಿ. ಬೇಳೆಕಾಳುಗಳಲ್ಲಿ ಇರುವ ಪ್ರೋಟೀನ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಫೈಬರ್ ಮತ್ತು ಪೊಟ್ಯಾಸಿಯಮ್ ಮಕ್ಕಳ ಸರಿಯಾದ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.

ರಾಗಿ

ಗೋಧಿಯ ಬದಲಿಗೆ ರಾಗಿ ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ತಿನ್ನುವುದರಿಂದ ಮಗುವಿನ ತೂಕವು ವೇಗವಾಗಿ ಹೆಚ್ಚಾಗುತ್ತದೆ. ಏಕೆಂದರೆ ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣವು ಇತರ ಯಾವುದೇ ಹಿಟ್ಟಿಗಿಂತಲೂ ಹೆಚ್ಚಾಗಿದೆ. ಇದು ಫೈಬರ್ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ.

ಚಿಯಾ ಸೀಡ್ಸ್‌

ಚಿಯಾ ಸೀಡ್ಸ್‌ ಮಕ್ಕಳ ತೂಕವನ್ನು ತ್ವರಿತವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಹೇರಳವಾದ ಫೈಬರ್ ಮತ್ತು ಎಂಟಿಒಕ್ಸಿಡೆಂಟ್‌ಗಳು ಇವೆ. ಚಿಯಾ ಬೀಜಗಳನ್ನು ಪುಡಿಮಾಡಿ ಅವುಗಳನ್ನು ಆಹಾರದಲ್ಲಿ ಮಿಶ್ರಣ ಮಾಡಿ ಮಗುವಿಗೆ ತಿನ್ನಿಸಬೇಕು.

ಸಿಹಿ ಗೆಣಸು

ಸಿಹಿ ಗೆಣಸು ಅತ್ಯಂತ ಪೌಷ್ಠಿಕ ಅಹಾರಗಳಲ್ಲೊಂದು. ಇದನ್ನು ಜೀರ್ಣಿಸಿಕೊಳ್ಳುವುದು ಸುಲಭ. ಸಿಹಿ ಗೆಣಸಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ6, ತಾಮ್ರ, ರಂಜಕ, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್‌ನಂತಹ ಪೋಷಕಾಂಶಗಳು ಹೇರಳವಾಗಿವೆ. ಇವೆಲ್ಲವೂ ಮಕ್ಕಳ ತೂಕ ಹೆಚ್ಚಿಸಲು ಅವಶ್ಯಕ. ಸಿಹಿ ಗೆಣಸನ್ನು ಬೇಯಿಸಿ ಮಕ್ಕಳಿಗೆ ತಿನ್ನಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...