alex Certify ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​ :10ನೇ ತರಗತಿ ಉತ್ತೀರ್ಣರಾದವರಿಗೆ 25 ಸಾವಿರಕ್ಕೂ ಅಧಿಕ ಹುದ್ದೆಗೆ ಅರ್ಜಿ ಆಹ್ವಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​ :10ನೇ ತರಗತಿ ಉತ್ತೀರ್ಣರಾದವರಿಗೆ 25 ಸಾವಿರಕ್ಕೂ ಅಧಿಕ ಹುದ್ದೆಗೆ ಅರ್ಜಿ ಆಹ್ವಾನ..!

ಸಿಬ್ಬಂದಿ ನೇಮಕಾತಿ ಆಯೋಗವು 25 ಸಾವಿರ ಕಾನ್​ಸ್ಟೇಬಲ್​ ಹಾಗೂ ರೈಫಲ್​ ಮ್ಯಾನ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಗಸ್ಟ್​ 31 ಕೊನೆಯ ದಿನಾಂಕವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಉಮಂಗ್​ ಅಪ್ಲಿಕೇಶನ್​ ಅಥವಾ ssc.nic.in ಅಧಿಕೃತ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಬಿಎಸ್​ಎಫ್​, ಸಿಐಎಸ್​ಎಫ್​​, ಸಿಆರ್​ಪಿಎಫ್​, ಐಟಿಬಿಪಿ, ಎಸ್​ಎಸ್​ಬಿ, ಎನ್​ಐಎ ಹಾಗೂ ಎಸ್​ಎಸ್​​ಎಫ್​​ಗೆ ಒಟ್ಟು 25,271 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳು:
ಬಿಎಸ್​ಎಫ್​ : 7545

ಸಿಐಎಸ್​ಎಫ್​ : 8464

ಸಿಆರ್​ಪಿಎಫ್​:0

ಎಸ್​ಎಸ್​ಬಿ : 3806

ಐಟಿಬಿಪಿ : 1431

ಎಆರ್​ :3785

ಎನ್​ಐಎ: 0

ಎಸ್​ಎಸ್​ಎಫ್​ :240

ಅರ್ಹತಾ ಮಾನದಂಡ

ಮಾನ್ಯತೆ ಪಡೆದ ಶಿಕ್ಷಣ ಇಲಾಖೆಯಿಂದ 10ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಅಭ್ಯರ್ಥಿಗಳನ್ನು ಕಂಪ್ಯೂಟರ್​ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಹಾಗೂ ದೈಹಿಕ ಗುಣಮಟ್ಟದ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ವಯಸ್ಸಿನ ಮಿತಿ :

ಅಭ್ಯರ್ಥಿಗಳಿಗೆ ಕನಿಷ್ಟ 18 ಹಾಗೂ ಗರಿಷ್ಟ 23 ವರ್ಷ ವಯಸ್ಸಾಗಿರಬೇಕು.

ವೇತನ ಶ್ರೇಣಿ :

21700 ರೂ – 69100 ರೂಪಾಯಿ

ಅರ್ಜಿ ಶುಲ್ಕ

ಪುರುಷರು (ಜನರಲ್​) – 100 ರೂ.
ಮಹಿಳೆ/ ಎಸ್ಸಿ/ಎಸ್ಟಿ/ ಮಾಜಿ ಸೈನಿಕ – ಶುಲ್ಕದಿಂದ ವಿನಾಯ್ತಿ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...