alex Certify ಸಂಸದ ಬಸವರಾಜ್ ನಪುಂಸಕ: ಮೋದಿ ಎದುರಾದರೆ ಬಿಜೆಪಿ ಸಂಸದರು ಮೂತ್ರ ವಿಸರ್ಜನೆ ಮಾಡಿಕೊಳ್ತಾರೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ ಶ್ರೀನಿವಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸದ ಬಸವರಾಜ್ ನಪುಂಸಕ: ಮೋದಿ ಎದುರಾದರೆ ಬಿಜೆಪಿ ಸಂಸದರು ಮೂತ್ರ ವಿಸರ್ಜನೆ ಮಾಡಿಕೊಳ್ತಾರೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ ಶ್ರೀನಿವಾಸ್

ತುಮಕೂರು: ಬಿಜೆಪಿ ಸಂಸದ ಜಿ.ಎಸ್. ಬಸವರಾಜು ವಿರುದ್ಧ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ನಾಲಿಗೆ ಹರಿಬಿಟ್ಟಿದ್ದಾರೆ.

ತುಮಕೂರಿನಲ್ಲೊಬ್ಬ ನಪುಂಸಕ ಸಂಸದ ಇದ್ದಾನೆ. ಒಂದೇ ಒಂದು ದಿನ ಸಂಸತ್ ನಲ್ಲಿ ಮಾತನಾಡಿಲ್ಲ. ಯಾವ ಪುರುಷಾರ್ಥಕ್ಕಾಗಿ ಅಂತವರನ್ನು ಗೆಲ್ಲಿಸಿ ಕಳಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ನಪುಂಸಕರು ನಮಗೆ ಬೇಕಾಗಿಲ್ಲ, ಅಭಿವೃದ್ಧಿ ಆಗಬೇಕು ಎಂದರೆ ಮುದ್ದಹನುಮೇಗೌಡರ ಗೆಲ್ಲಿಸಬೇಕು. ಸಂಸತ್ ನಲ್ಲಿ ಮಾತನಾಡುವಂತಹ ಮುದ್ದಹನುಮೇಗೌಡರು ಬೇಕಾಗಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿರುವ ಬಿಜೆಪಿಯ 26 ಸಂಸದರು ಮೋದಿಗೆ ಹೆದರುತ್ತಾರೆ. ಮೋದಿ ಬಂದರೆ ಹೆದರಿ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾರೆ. ಕೇಂದ್ರದ ಬಳಿ ಬರ ಪರಿಹಾರ ಕೇಳಿದ್ದರೂ ನಯಾ ಪೈಸೆ ಬಿಡುಗಡೆಯಾಗಿಲ್ಲ. ನರೇಂದ್ರ ಮೋದಿ ಅವರಿಂದ ರಾಜ್ಯಕ್ಕೆ ಮೋಸವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರಿಗೂ ಪಾಲು ಕೊಡುವುದು ಕೇಂದ್ರದ ಕರ್ತವ್ಯ. ಆದರೆ, ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದ್ದು, ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸಲು ಕಾಂಗ್ರೆಸ್ ಬೆಂಬಲಿಸಿ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...