alex Certify ಸಾವಿರಾರು ಫೋನ್ ಕರೆ ಸ್ವೀಕರಿಸಿದ ವ್ಯಕ್ತಿಗೆ ಸಿಕ್ತು 63 ಲಕ್ಷ ರೂ. ಬಹುಮಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿರಾರು ಫೋನ್ ಕರೆ ಸ್ವೀಕರಿಸಿದ ವ್ಯಕ್ತಿಗೆ ಸಿಕ್ತು 63 ಲಕ್ಷ ರೂ. ಬಹುಮಾನ..!

ನ್ಯೂ ನೆಟ್‌ಫ್ಲಿಕ್ಸ್ ಹಿಟ್ ಸ್ಕ್ವಿಡ್ ಗೇಮ್ ನಲ್ಲಿ ತನ್ನ ಮೊಬೈಲ್ ಸಂಖ್ಯೆಯು ಕಾಣಿಸಿಕೊಂಡ ನಂತರ ದಕ್ಷಿಣ ಕೊರಿಯಾದ ವ್ಯಕ್ತಿಗೆ ಸಾವಿರಾರು ಫೋನ್ ಕರೆಗಳು ಬಂದಿವೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಇನ್ನೊಂದು ಟ್ವಿಸ್ಟ್‌ನಲ್ಲಿ, ಆ ವ್ಯಕ್ತಿಗೆ ಅದೇ ಫೋನ್ ನಂಬರ್ ಬಯಸಿರುವ ಒಬ್ಬರು 63 ಲಕ್ಷ ರೂಪಾಯಿ ಆಫರ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸ್ಕ್ವಿಡ್ ಗೇಮ್ ಒಂದು ಶೋ ಆಗಿದ್ದು, ಇದರಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಜನರು 39 ಮಿಲಿಯನ್ ಯುಎಸ್ ಡಾಲರ್ ಗೆ ಮಕ್ಕಳ ಆಟದಲ್ಲಿ ಪರಸ್ಪರರ ವಿರುದ್ಧ ಸ್ಪರ್ಧಿಸುತ್ತಾರೆ.

ಬಾಲ್ಯದಲ್ಲಿ ನಡೆದ ಆಘಾತಕಾರಿ ಘಟನೆಯನ್ನು ಬಹಿರಂಗಪಡಿಸಿದ ಖ್ಯಾತ ಗಾಯಕಿ..!

ಕೊರಿಯಾ ಟೈಮ್ಸ್ ಹೇಳುವಂತೆ ಕೊರಿಯನ್ ಮೂಲ ಸರಣಿಯು ಹಲವಾರು ದೇಶಗಳಲ್ಲಿ ಜಾಗತಿಕ ಸ್ಟ್ರೀಮಿಂಗ್ ಸೇವೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಟ ಗಾಂಗ್ ಯೂ ಅವರನ್ನು ನಿರ್ವಹಿಸಿದ ವ್ಯಕ್ತಿ ಎಂಟು ಅಂಕಿ ಫೋನ್ ಸಂಖ್ಯೆಯನ್ನು ಹೊಂದಿರುವ ವ್ಯಾಪಾರ ಕಾರ್ಡ್ ಗಳನ್ನು ಮುಖ್ಯ ಪಾತ್ರ ಸಿಯೊಂಗ್ ಗೆ ನೀಡುತ್ತಾರೆ. ಆಟಕ್ಕೆ ಸೇರಲು ಬಯಸಿದರೆ ಆ ಸಂಖ್ಯೆಗೆ ಕರೆ ಮಾಡಲು ಅವರು ಹೇಳುತ್ತಾರೆ.

ಅಲ್ಲಿ ಭಾಗವಹಿಸುವವರು ಭಾರಿ ಮೊತ್ತದ ಬಹುಮಾನ ಮೊತ್ತವನ್ನು ಗೆಲ್ಲಲು ತಮ್ಮ ಜೀವನವನ್ನೇ ಪಣ ತೊಡುತ್ತಾರೆ. ಹಗಲು ಮತ್ತು ರಾತ್ರಿ ಎನ್ನದೆ ಅಂತ್ಯವಿಲ್ಲದ ಕರೆಗಳಿಂದಾಗಿ ತನ್ನ ಸಾಮಾನ್ಯ ಜೀವನವನ್ನು ಮುಂದುವರೆಸಲು ಸಾಧ್ಯವೇ ಇಲ್ಲ ಅನ್ನೋದು ಸಂಖ್ಯೆಯನ್ನು ಹೊಂದಿರುವವರ ಅಂಬೋಣ.

ಇನ್ನು ಸಂಖ್ಯೆಯ ಮಾಲೀಕರು ಈ ಸಂಖ್ಯೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಅದು ಅವರ ವ್ಯವಹಾರಕ್ಕೆ ಸಂಬಂಧ ಪಟ್ಟುದಾಗಿದೆ. ಪರಿಸ್ಥಿತಿಯಿಂದಾಗಿ ಅವರು ತುಂಬಾ ಒತ್ತಡದಲ್ಲಿದ್ದಾರೆ. ಕರೆಗಳು ಬರಲು ಪ್ರಾರಂಭವಾಗುವ ಮೊದಲು ಕಾರ್ಯಕ್ರಮದ ಬಗ್ಗೆ ಕೂಡ ಕೇಳಿಲ್ಲ ಎಂಬ ಬಗ್ಗೆ ವರದಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...