alex Certify “ಪುಸ್ತಕ ತೆರೆಯಿರಿ, ಕಾಲುಗಳನ್ನು ಮಡಿಚಿ” ಎಂದು ಹೆಣ್ಣುಮಕ್ಕಳಿಗೆ ಕರೆ ನೀಡಿದ ದಕ್ಷಿಣ ಆಫ್ರಿಕಾ ಸಚಿವೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

“ಪುಸ್ತಕ ತೆರೆಯಿರಿ, ಕಾಲುಗಳನ್ನು ಮಡಿಚಿ” ಎಂದು ಹೆಣ್ಣುಮಕ್ಕಳಿಗೆ ಕರೆ ನೀಡಿದ ದಕ್ಷಿಣ ಆಫ್ರಿಕಾ ಸಚಿವೆ…!

ರಾಜಕೀಯ ನಾಯಕರು ಜನರಿಗೆ ನೀಡುವ ಕರೆಗಳು ಅಪಹಾಸ್ಯಕ್ಕೀಡಾಗುತ್ತವೆ. ಅವರೂ ಕೆಲವೊಮ್ಮೆ ಅಂತಹ ಕರೆಗಳನ್ನು ಉದ್ದೇಶಪೂರ್ವಕವಾಗಿಯೇ ನೀಡುತ್ತಾರೆ. ಇದೇ ರೀತಿ, ದಕ್ಷಿಣ ಆಫ್ರಿಕಾದಲ್ಲಿ ಸಚಿವೆಯು ವಿದ್ಯಾರ್ಥಿನಿಯರಿಗೆ ನೀಡಿದ ಕರೆಯು ವಿವಾದಕ್ಕೀಡಾಗಿದೆ. ಸಚಿವೆಯನ್ನು ಜನ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಸೆಕ್ಗಾಗಾಪೆಂಗ್ ನಗರದಲ್ಲಿರುವ ಶಾಲೆಯೊಂದಕ್ಕೆ ತೆರಳಿದ್ದ ಆರೋಗ್ಯ ಸಚಿವೆ ಫೋಫಿ ರಮಾಥುವಾ ಅವರು ವಿದ್ಯಾರ್ಥಿಗಳಿಗೆ ನಿಮ್ಮ ಪುಸ್ತಕ ಮಾತ್ರ ತೆರೆಯಿರಿ, ಕಾಲುಗಳನ್ನು ಮಾತ್ರ ಯಾರಿಗೂ ಕಾಣಿಸದಂತೆ ಮುಚ್ಚಿಕೊಳ್ಳಿ ಎಂದು ಕರೆ ನೀಡಿದ್ದಾರೆ. ಅಲ್ಲದೆ, ಓಪನ್ ಯುವರ್ ಬುಕ್ಸ್, ಕ್ಲೋಸ್ ಯುವರ್ ಲೆಗ್ಸ್ ಎಂದು ತಾವೂ ಹೇಳಿದ್ದು, ಇದನ್ನು ವಿದ್ಯಾರ್ಥಿಗಳಿಂದಲೂ ಹಲವು ಬಾರಿ ಹೇಳಿಸಿದ್ದಾರೆ. ಇಂತಹ ಹೇಳಿಕೆಗಳುಳ್ಳ 30 ಸೆಕೆಂಡ್‌ನ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಸಣ್ಣ ವಯಸ್ಸಿನಲ್ಲೇ ಹೆಣ್ಣುಮಕ್ಕಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಗರ್ಭವತಿಯಾಗುತ್ತಿರುವುದನ್ನು ತಡೆಯಲು ಹಾಗೂ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸುವ ದಿಸೆಯಲ್ಲಿ ಸಚಿವೆಯು ಮಕ್ಕಳಿಗೆ ಇಂತಹ ಕರೆ ನೀಡಿದ್ದಾರೆ ಎಂದು ಹೇಳಲಾಗಿದೆಯಾದರೂ ಸಣ್ಣ ವಯಸ್ಸಿನ ಮಕ್ಕಳಿಗೆ ಹೀಗೆ ಕರೆ ನೀಡಿರುವುದನ್ನು ಜನ ಖಂಡಿಸಿದ್ದಾರೆ.

ಬಗೆಹರಿಯದ ಅತಿಥಿ ಉಪನ್ಯಾಸಕರ ಸಂಕಷ್ಟ: ಪ್ರತಿಭಟನೆ ಮುಂದುವರೆಸಲು ನಿರ್ಧಾರ

ಮಕ್ಕಳಿಗೆ ಹೀಗೆ ಕರೆ ನೀಡುವುದು ಎಷ್ಟು ಸರಿ ? ಸಣ್ಣ ವಯಸ್ಸಿನಲ್ಲೇ ಅವರ ತಲೆಯಲ್ಲಿ ಇಂತಹ ವಿಚಾರಗಳನ್ನು ಬಿತ್ತುವುದರಿಂದ ಅವರ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರುತ್ತದೆ ? ಅಷ್ಟಕ್ಕೂ, ಸಚಿವೆಯೇನು ಸರಕಾರದ ಪರವಾಗಿ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ತರಗತಿ ತೆಗೆದುಕೊಳ್ಳುತ್ತಿದ್ದಾರೆಯೇ ? ಇದು ಸರಿಯಲ್ಲ ಎಂಬುದು ಸೇರಿ ಹಲವು ರೀತಿಯಲ್ಲಿ ಸಚಿವೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮಕ್ಕಳಿಗೆ ಮಾಡುವ ಅವಮಾನ ಎಂದೂ ಒಂದಷ್ಟು ಜನ ಕುಟುಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...