alex Certify ದಕ್ಷಿಣ ಆಫ್ರಿಕ ತಂಡವನ್ನು ಬಗ್ಗು ಬಡಿದ ನೆದರ್ಲೆಂಡ್; ಸೆಮಿಫೈನಲ್ ಗೆ ಪ್ರವೇಶಿಸಲು ಪಾಕಿಸ್ತಾನಕ್ಕೆ ಮತ್ತೊಂದು ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ಆಫ್ರಿಕ ತಂಡವನ್ನು ಬಗ್ಗು ಬಡಿದ ನೆದರ್ಲೆಂಡ್; ಸೆಮಿಫೈನಲ್ ಗೆ ಪ್ರವೇಶಿಸಲು ಪಾಕಿಸ್ತಾನಕ್ಕೆ ಮತ್ತೊಂದು ಅವಕಾಶ

ಇಂದು ಅಡಿಲೇಡ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ನೆದರ್ಲೆಂಡ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ ಲ್ಯಾಂಡ್ ತಂಡ 13ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ.

ಕ್ರಿಕೆಟ್ ಅಭಿಮಾನಿಗಳ ಫೇವರಿಟ್ ಟೀಮ್ ಆಗಿದ್ದ ದಕ್ಷಿಣ ಆಫ್ರಿಕಾ ತಂಡ ಇಂದು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ನೆದರ್‌ಲ್ಯಾಂಡ್ 158  ರನ್ ಗಳ ಉತ್ತಮ ಮೊತ್ತ ಕಲೆ ಹಾಕಿತ್ತು.

ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿದೆ. 13ರನ್ ಗಳಿಂದ ಜಯ ಸಾಧಿಸುವ ಮೂಲಕ ನೆದರ್ಲೆಂಡ್ ಹೊಸ ದಾಖಲೆ ಬರೆದಿದೆ. ವಿಶ್ವಕಪ್ ನಿಂದ ಹೊರಗುಳಿದಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಇದೊಂದು ಭಾರಿ ಆಘಾತವಾಗಿದೆ

ಇಂದು ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗಲಿದ್ದು, ಈ ಎರಡೂ ತಂಡಕ್ಕೆ ಸೆಮಿಫೈನಲ್ ಬರುವ ಅವಕಾಶ ಸಿಕ್ಕಿದೆ. ಎರಡು ತಂಡಗಳು ತಲಾ 4 ಅಂಕಗಳನ್ನು ಪಡೆದುಕೊಂಡಿದ್ದು, ಗೆದ್ದ ತಂಡ ನೇರ ಸೆಮಿಫೈನಲ್ ಗೆ ಲಗ್ಗೆ ಇಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...