alex Certify ಪತ್ನಿ ಕೈ ಹಿಡಿದು ಕೊನೆಯುಸಿರೆಳೆದ ಮಾಜಿ ಪ್ರಧಾನಿ : ಪತಿ ಜೊತೆ ಇಹಲೋಕ ತ್ಯಜಿಸಿದ ಮೈ ಗರ್ಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಕೈ ಹಿಡಿದು ಕೊನೆಯುಸಿರೆಳೆದ ಮಾಜಿ ಪ್ರಧಾನಿ : ಪತಿ ಜೊತೆ ಇಹಲೋಕ ತ್ಯಜಿಸಿದ ಮೈ ಗರ್ಲ್

Former Dutch PM, wife die 'hand in hand' by euthanasia at age 93 | CTV News

ನೆದರ್ಲ್ಯಾಂಡ್‌ ನ ಮಾಜಿ ಪ್ರಧಾನಿ ಮತ್ತು ಅವರ ಪತ್ನಿ, ಅನೇಕಾನೇಕ ವರ್ಷ ಎಲ್ಲರ ನೆನಪಿನಲ್ಲಿರುವಂತಹ ಕೆಲಸ ಮಾಡಿದ್ದಾರೆ. ಸಾವನ್ನೂ ಒಂದೇ ಬಾರಿ ಸ್ವೀಕರಿಸುವ ಮೂಲಕ ಪ್ರೀತಿಯ ಮಹತ್ವ ಸಾರಿದ್ದಾರೆ. 93 ನೇ ವಯಸ್ಸಿನಲ್ಲಿ ಡ್ರೈಸ್ ವ್ಯಾನ್ ಆಗ್ಟ್ ಮತ್ತು ಅವರ ಪತ್ನಿ ಯುಜೆನಿ ಕಾನೂನಿನ ಪ್ರಕಾರ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದರು. ಫೆಬ್ರವರಿ 5 ರಂದು ಇಬ್ಬರೂ ತಮ್ಮ ಮನೆಯೊಳಗೆ ಪರಸ್ಪರ ಕೈ ಹಿಡಿದುಕೊಂಡು ಕೊನೆಯುಸಿರೆಳೆದಿದ್ದಾರೆ. ಅವರು 70 ವರ್ಷಗಳಿಗಿಂತ ಹೆಚ್ಚು ಕಾಲ ಪತ್ನಿ ಜೊತೆಗಿದ್ದರು. ಪತ್ನಿಯನ್ನು ಮೈ ಗರ್ಲ್ ಎಂದೇ ಅವರು ಕರೆಯುತ್ತಿದ್ದರು.

ಇಬ್ಬರಿಗೂ ಡ್ಯುಯೊ ದಯಾಮರಣ ನೀಡಲಾಗಿದೆ. ಇದು ಮಾರಣಾಂತಿಕ ಚುಚ್ಚುಮದ್ದಾಗಿದ್ದು, ತೆಗೆದುಕೊಂಡ ತಕ್ಷಣ ಅವರು ಸಾವನ್ನಪ್ಪುತ್ತಾರೆ. ನೆದರ್ಲ್ಯಾಂಡ್ ನಲ್ಲಿ ದಯಾಮರಣ ಕಾನೂನು ಇದೆ. ತೀವ್ರ ಅನಾರೋಗ್ಯಕ್ಕೆ ಒಳಗಾದವರಿಗೆ ಇದನ್ನು ನೀಡಲಾಗುತ್ತದೆ. ಇಬ್ಬರನ್ನೂ ಹುಟ್ಟೂರಾದ ನಿಜ್ಮೆಗನ್‌ನಲ್ಲಿ ಸಮಾಧಿ ಮಾಡಲಾಗಿದೆ.

ಡ್ರೈಸ್ ಡಿಸೆಂಬರ್ 1977 ರಿಂದ ನವೆಂಬರ್ 1982 ರವರೆಗೆ ನೆದರ್ಲ್ಯಾಂಡ್ಸ್ನ ಪ್ರಧಾನ ಮಂತ್ರಿಯಾಗಿದ್ದರು. 2019ರಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಆ ಸಮಯದಲ್ಲಿ ಅವರಿಗೆ ಬ್ರೈನ್‌ ಹ್ಯಾಮ್ರೇಜ್‌ ಆಗಿತ್ತು. ಪತ್ನಿ ನಿರಂತರ ಅವರ ಸೇವೆ ಮಾಡಿದ್ದರು. ಆದ್ರೆ ವಯಸ್ಸಾಗ್ತಿದ್ದಂತೆ ಒಬ್ಬರನ್ನೊಬ್ಬರು ನೋಡಿಕೊಳ್ಳೋದು ಕಷ್ಟವಾದ ಕಾರಣ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...