alex Certify BIG NEWS: ಶೀಘ್ರದಲ್ಲೇ ಅಮೆರಿಕನ್ ಷೇರುಗಳ ಮೇಲೆ ಹೂಡಿಕೆ ಮಾಡಲು ಭಾರತೀಯರಿಗೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶೀಘ್ರದಲ್ಲೇ ಅಮೆರಿಕನ್ ಷೇರುಗಳ ಮೇಲೆ ಹೂಡಿಕೆ ಮಾಡಲು ಭಾರತೀಯರಿಗೆ ಅವಕಾಶ

ರಾಷ್ಟ್ರೀಯ ಷೇರು ಮಾರುಕಟ್ಟೆಯ (ಎನ್‌ಎಸ್‌ಇ) ಅಂತಾರಾಷ್ಟ್ರೀಯ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಅಮೆರಿಕನ್ ಕಂಪನಿಗಳಾದ ಅಮೇಜ಼ಾನ್, ಗೂಗಲ್‌, ಮೈಕ್ರೋಸಾಫ್ಟ್‌ಗಳಂಥ ಕಂಪನಿಗಳ

ಷೇರುಗಳನ್ನು ಭಾರತೀಯ ಹೂಡಿಕೆದಾರರು ಖರೀದಿ ಮಾಡಬಹುದಾದ ಸಮಯ ಬರುತ್ತಿದೆ.

ಗುಜರಾತ್‌ನ ಅಹಮದಾಬಾದ್‌ ಬಳಿ ಇರುವ ಎನ್‌ಎಸ್‌ಇನ ಗಿಫ್ಟ್‌‌ ನಗರದ ಶಾಖೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಅಮೆರಿಕದ ಸ್ಟಾಕ್‌ಗಳು ಹಾಗೂ ಬ್ರೋಕರ್‌ ನೋಂದಣಿಗಳನ್ನು ಖರೀದಿ ಮಾಡಲು ಭಾರತೀಯ ಹೂಡಿಕೆದಾರರಿಗೆ ಅನುಕೂಲ ಮಾಡಲಾಗಿದೆ ಎಂದು ಎನ್‌ಎಸ್‌ಇ ತಿಳಿಸಿದೆ. ಈ ವ್ಯವಸ್ಥೆ ಮೂಲಕ ಗಿಫ್ಟ್ ಸಿಟಿಯಲ್ಲಿರುವ ಬ್ರೋಕರ್‌ಗಳೊಂದಿಗೆ ಡಿಮ್ಯಾಟ್ ಖಾತೆಗಳನ್ನು ಹೂಡಿಕೆದಾರರು ತೆರೆದು ಆ ಮೂಲಕ ಅಮೆರಿಕನ್ ಸ್ಟಾಕ್‌ಗಳ ಭಾಗಶಃ ಮಾಲೀಕತ್ವ ಪಡೆಯಬಹುದಾಗಿದೆ.

BIG NEWS: ಶಿಲ್ಪಾ ಶೆಟ್ಟಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಇಡಿಯ ವಹಿವಾಟು, ಕ್ಲಿಯರಿಂಗ್, ಸೆಟ್ಲ್‌ಮೆಂಟ್ ಹಾಗೂ ಅಮೆರಿಕನ್ ಸ್ಟಾಕ್‌ಗಳ ಮಾಲೀಕ್ವವನ್ನು ಅಂತಾರಾಷ್ಟ್ರೀಯ ಆರ್ಥಿಕ ಸೇವೆಗಳ ಕೇಂದ್ರದ (ಐಎಫ್‌ಎಸ್‌ಸಿ) ಮೇಲುಸ್ತುವಾರಿಯಲ್ಲಿ ನಡೆಯಲಿವೆ.

ಆರ್‌ಬಿಐನ ಲಿಬರಲೈಸ್ಟ್‌ ರೆಮಿಟೆನ್ಸ್ ಸ್ಕೀಂ (ಎಲ್‌ಎಸ್‌ಆರ್‌) ಮುಖಾಂತರ ಭಾರತೀಯರು ವಾರ್ಷಿಕ $250,000ಗಳವರೆಗೂ ಅಮೆರಿಕದ ಸ್ಟಾಕ್‌ಗಳ ಮೇಲೆ ಹೂಡಿಕೆ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...