alex Certify BIG NEWS: ಶಿಲ್ಪಾ ಶೆಟ್ಟಿಗೆ ಎದುರಾಯ್ತು ಮತ್ತೊಂದು ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಿಲ್ಪಾ ಶೆಟ್ಟಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಕಂಟಕ ತಗುಲಿ ಹಾಕಿಕೊಂಡಿದ್ದು, ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಲಖನೌ ಪೊಲೀಸ್‌ ತಂಡವೊಂದು ಮುಂಬಯಿಗೆ ಆಗಮಿಸಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ತಾಯಿಯನ್ನು ಪ್ರಶ್ನಿಸುವ ಸಾಧ್ಯತೆ ಇದೆ. ವೆಲ್‌‌ನೆಸ್ ಕೇಂದ್ರವೊಂದನ್ನು ನಡೆಸುವ ಸೋಗಿನಲ್ಲಿ ವಂಚನೆ ಎಸಗಲಾಗಿದೆ ಎಂದು ಆರೋಪದಲ್ಲಿ ಲಖನೌನ ಹಜ಼ರತ್‌ಗಂಜ್ ಹಾಗೂ ವಿಭೂತಿ ಖಾಂಡ್ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

BIG NEWS: ಇನ್ಮುಂದೆ ಚಿತ್ರೀಕರಣಕ್ಕೆ ಟಫ್ ರೂಲ್ಸ್ ಜಾರಿ; ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; ಸಿಎಂ ಬೊಮ್ಮಾಯಿ ಎಚ್ಚರಿಕೆ

ಐಯೋಸಿಸ್ ಫಿಟ್ನೆಸ್ ಸೆಂಟರ್‌ ಹೆಸರಿನಲ್ಲಿ ವೆಲ್‌ನೆಸ್ ಉದ್ಯಮ ನಡೆಸುವ ಶಿಲ್ಪಾ ಶೆಟ್ಟಿ, ಇದಕ್ಕೆ ತಮ್ಮ ತಾಯಿಯನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ತಮ್ಮ ವೆಲ್‌ನೆಸ್ ಕೇಂದ್ರವೊಂದನ್ನು ಸ್ಥಾಪಿಸುವುದಾಗಿ ಹೇಳಿ ಇಬ್ಬರಿಂದ ಕೋಟ್ಯಂತ ರೂಪಾಯಿ ಪಡೆದುಕೊಂಡ ಶಿಲ್ಪಾ ಹಾಗೂ ಆಕೆಯ ತಾಯಿ ಮಾತು ತಪ್ಪಿದ್ದಾರೆ.

ಈ ಪ್ರಕರಣದಲ್ಲಿ ಇಲ್ಲಿನ ಒಮೇಕ್ಸ್‌ ಹೈಟ್ಸ್‌ನ ಜ್ಯೋತ್ಸ್ನಾ ಚೌಹಾಣ್ ವಿಭೂತಿ ಖಾಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೋಹಿತ್ ವೀರ್‌ ಸಿಂಗ್ ಎಂಬ ಮತ್ತೊಬ್ಬ ವ್ಯಕ್ತಿ ಹಜ಼ರತ್‌ಗಂಜ಼್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...