alex Certify ಶಾಲೆಗೆ ತೆರಳುವ ಬಾಲಕಿಗೆ ಸೈಕಲ್​ ನೀಡಿ ಮಾನವೀಯತೆ ಮೆರೆದ ಸೋನು ಸೂದ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗೆ ತೆರಳುವ ಬಾಲಕಿಗೆ ಸೈಕಲ್​ ನೀಡಿ ಮಾನವೀಯತೆ ಮೆರೆದ ಸೋನು ಸೂದ್​

ತಮ್ಮ ಮಾನವೀಯ ಕಾರ್ಯಗಳ ಮೂಲಕ ಮತ್ತೊಮ್ಮೆ ಸೋಶಿಯಲ್​ ಮೀಡಿಯಾದಲ್ಲಿ ಲಕ್ಷಾಂತರ ನೆಟ್ಟಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಸೋನು ಸೂದ್​ ನೀಲಾಂಜನಾ ಎಂಬ ಬಾಲಕಿಗೆ ಸೈಕಲ್​ನ್ನು ಉಡುಗೊರೆಯಾಗಿ ನೀಡುವ ಮೂಲಕ ಆಕೆ ಶಾಲೆಗೆ ತೆರಳಲು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಾಮಾಜಿಕ ಕಾರ್ಯಕರ್ತ ವಿಕಾಶ್​ ಕುಮಾರ್​ ಗುಪ್ತಾ ಟ್ವಿಟರ್​​ನಲ್ಲಿ ಸುದೀರ್ಘ ಟಿಪ್ಪಣಿಯನ್ನು ಬರೆಯುವ ಮೂಲಕ ಸೋನು ಸೂದ್​ರ ಮಾನವೀಯ ಕಾರ್ಯವನ್ನು ಬೆಳಕಿಗೆ ತಂದಿದ್ದಾರೆ. ಬಾಲಕಿಯ ಶಿಕ್ಷಣ ಪಡೆಯುವ ಕನಸಿಗೆ ನೀರೆರೆದ ಸೋನು ಸೂದ್​ಗೆ ವಿಕಾಶ್​ ಧನ್ಯವಾದ ಅರ್ಪಿಸಿದ್ದಾರೆ. ಟ್ವಿಟರ್​ನಲ್ಲಿ ವಿಕಾಶ್​ ಶೇರ್​ ಮಾಡಿರುವ ಫೋಟೋದಲ್ಲಿ ಶಾಲಾ ಸಮವಸ್ತ್ರ ಧರಿಸಿರುವ ಬಾಲಕಿಯು ಸೈಕಲ್​ ಹಿಡಿದು ಮಂದಹಾಸ ಬೀರಿದ್ದಾಳೆ.

ಹಿಂದಿಯಲ್ಲಿ ಶೀರ್ಷಿಕೆಯನ್ನು ಬರೆದಿರುವ ವಿಕಾಶ್​, ನಾನು ಎಲ್ಲರಿಗಿಂತ ಉತ್ತಮ ಎಂದು ಹೇಳಿದರೆ ಅದರಿಂದ ಪ್ರಯೋಜನವೇನಿಲ್ಲ. ಆದರೆ ಯಾರಿಗಾಗಿಯಾದರೂ ನಾವು ಉತ್ತಮ ಕಾರ್ಯ ಮಾಡಿದರೆ ಅದರಿಂದ ಪ್ರಯೋಜನವಿದೆ. ನಟ ಸೋನು ಸೂದ್, ನೀಲಾಂಜನಾ ಎಂಬ ಬಾಲಕಿಗೆ ಸೈಕಲ್​ ನೀಡಿ ಆಕೆ ಶಾಲೆಗೆ ಹೋಗಲು ನೆರವಾಗಿದ್ದಾರೆ. ಸೋನು ಸೂದ್​ಗೆ ಧನ್ಯವಾದಗಳು ಎಂದು ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸೋನು ಸೂದ್​, ಒಂದು ದಿನ ನಾನು ನೀಲಾಂಜನಾ ಸೈಕಲ್​ನಲ್ಲಿ ಆಕೆಯ ಜೊತೆ ಶಾಲೆಗೆ ಹೋಗುತ್ತೇನೆ ಎಂದಿದ್ದಾರೆ. ಸೋನು ಸೂದ್​ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

— Vikash Kumar Gupta (@Vikash159980) July 1, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...