alex Certify ತಾಯಿ ಸೇವೆ ಸಲ್ಲಿಸಿದ ಕೇಂದ್ರದಿಂದಲೇ 27 ವರ್ಷಗಳ ಬಳಿಕ ಮಗ ಸೇನೆ ಸೇರ್ಪಡೆಗೆ ತೇರ್ಗಡೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಸೇವೆ ಸಲ್ಲಿಸಿದ ಕೇಂದ್ರದಿಂದಲೇ 27 ವರ್ಷಗಳ ಬಳಿಕ ಮಗ ಸೇನೆ ಸೇರ್ಪಡೆಗೆ ತೇರ್ಗಡೆ…!

ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯು ಜಾಲತಾಣ ಖಾತೆಯಲ್ಲಿ ಹಂಚಿಕೊಂಡ ಸ್ಪೂರ್ತಿದಾಯಕ ಹೃದಯಸ್ಪರ್ಶಿ ಪೋಸ್ಟ್​ ನೆಟ್ಟಿಗರ ಮನ ಗೆದ್ದಿದೆ.

ನಿವೃತ್ತ ಮೇಜರ್​ ಸ್ಮಿತಾ ಚತುರ್ವೇದಿ ರಕ್ಷಣಾ ಇಲಾಖೆಯ ಆಫೀಸರ್ಸ್​ ಟ್ರೈನಿಂಗ್​ ಅಕಾಡೆಮಿಯಲ್ಲಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರ ಮಗ ಅದೇ ಅಕಾಡೆಮಿಯಿಂದ ಉತ್ತೀರ್ಣರಾಗಿದ್ದಾರೆ. ಅವರಿಬ್ಬರ ಫೋಟೋವನ್ನು ರಕ್ಷಣಾ ಇಲಾಖೆ ಪಿ.ಆರ್​.ಒ. ಹಂಚಿಕೊಂಡಿದ್ದಾರೆ. ಪಾಸಾದ ತನ್ನ ಮಗನೊಂದಿಗೆ ನಿವೃತ್ತ ಅಧಿಕಾರಿ ತಾಯಿ ಫೋಟೋಗೆ ಖುಷಿಯಿಂದ ಪೋಸ್​ ನೀಡುತ್ತಿರುವುದನ್ನು ನೋಡಬಹುದು.

ಚತುರ್ವೇದಿಯವರ ಮುಖದಲ್ಲಿ ಸಂತೋಷವು ಸ್ಪಷ್ಟವಾಗಿ ಗೋಚರಿಸಿದೆ. “ಲೇಡಿ ಆಫೀಸರ್​ಗೆ ಇದು ಅಪರೂಪದ ಸಂಭ್ರಮದ ಕ್ಷಣ” ಎಂಬ ಶೀರ್ಷಿಕೆ ನೀಡಲಾಗಿದೆ.

ಮೇಜರ್​ ಸ್ಮಿತಾ ಚತುರ್ವೇದಿ (ನಿವೃತ್ತ) 1995ರಲ್ಲಿ ಅಂದರೆ 27 ವರ್ಷಗಳ ಮೊದಲು ಚೆನ್ನೈ ನ ಆಫೀಸರ್ಸ್​ ಟ್ರೈನಿಂಗ್​ ಅಕಾಡೆಮಿಗೆ ನೇಮಕಗೊಂಡಿದ್ದರು. ಚತುರ್ವೇದಿ ಸ್ವತಃ ತರಬೇತಿಯಲ್ಲಿ ಕೆಡೆಟ್​ ಆಗಿದ್ದ ಕಾಲದ ಚಿತ್ರವೂ ಸಹ ಟ್ವೀಟರ್ ಥ್ರೆಡ್​ನಲ್ಲಿದೆ.

ಭಾವಪರವಶರಾದ ಚತುರ್ವೇದಿಯವರ ಕಿರು ವಿಡಿಯೋವನ್ನು ಸಹ ಹಂಚಿಕೊಳ್ಳಲಾಗಿದೆ. ತನ್ನ ಮಗನ ಸಾಧನೆಯ ನಂತರ ತನಗೆ ಎಷ್ಟು ಸಂಭ್ರಮವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...