alex Certify ಹೆತ್ತ ತಂದೆಯನ್ನೇ ನಡುಬೀದಿಯಲ್ಲಿ ಥಳಿಸಿದ ಪಾಪಿ ಪುತ್ರ; ಶಾಕಿಂಗ್‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆತ್ತ ತಂದೆಯನ್ನೇ ನಡುಬೀದಿಯಲ್ಲಿ ಥಳಿಸಿದ ಪಾಪಿ ಪುತ್ರ; ಶಾಕಿಂಗ್‌ ವಿಡಿಯೋ ವೈರಲ್

ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು ಮಕ್ಕಳನ್ನು ಸಾಕುವ ತಂದೆ ತಾಯಿಯನ್ನು ಅವರ ಕೊನೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಆದರೆ, ಮಕ್ಕಳೇ ತಿರುಗಿ ಬೀಳುವುದನ್ನು ಸಮಾಜ ಸಹಿಸುವುದಿಲ್ಲ.

ಇಲ್ಲೊಂದು ಘಟನೆಯಲ್ಲಿ ಬೆಳೆದು ನಿಂತ ಮಗನೊಬ್ಬ ತನ್ನ ತಂದೆಯನ್ನು ನಡು ಬೀದಿಯಲ್ಲಿ ಹಿಗ್ಗಾಮುಗ್ಗ ಥಳಿಸಿದ್ದು, ಬಳಿಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.

ರಾಜಸ್ಥಾನದ ಜೋಧ್​ಪುರದಲ್ಲಿ ವೃದ್ಧ ತಂದೆಯೊಂದಿಗೆ ಅನುಚಿತವಾಗಿ ವತಿರ್ಸಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ವರದಿಗಳ ಪ್ರಕಾರ, ವ್ಯಕ್ತಿಯು ತನ್ನ ತಂದೆಯೊಂದಿಗೆ ಮನೆಯ ವಿಷಯಗಳಿಗೆ ಸಂಬಂಧಿಸಿದಂತೆ ಆಗಾಗ್ಗೆ ಜಗಳವಾಡುತ್ತಿದ್ದ. ಭಾನುವಾರವೂ ತನ್ನ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಅವರಿಬ್ಬರ ನಡುವೆ ವಾಗ್ವಾದವಾಗಿ, ಕೊನೆಗೆ ಆತ ಕೊಂಚವೂ ಕರುಣೆ ಇಲ್ಲದಂತೆ ತಂದೆಯನ್ನು ಥಳಿಸಿದ್ದಾನೆ.

ಆ ವೃದ್ಧರು ಮಗ ಕೊಟ್ಟ ಪೆಟ್ಟಿನಿಂದ ತಲೆಗೆ ನೋವು ಅನುಭವಿಸಿದ್ದು ವಿಡಿಯೋದಲ್ಲಿ ಕಾಣಿಸುತ್ತದೆ. ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಆತನ ವಿರುದ್ಧ ಸಿಟ್ಟಾಗಿದ್ದಾರೆ. ಸ್ಥಳೀಯ ಪೊಲೀಸರು ಸಿಆರ್​ಪಿಸಿ 151ರ ಅಡಿಯಲ್ಲಿ ಆತನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...