alex Certify ಚಿಪ್ಸ್‌ ಪೊಟ್ಟಣದಲ್ಲಿ ’ಉಬ್ಬಿದ ಚಿಪ್’ ಶೋಧಿಸಿದ ಬಾಲಕಿಗೆ 14 ಲಕ್ಷ ರೂ. ಬಹುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಪ್ಸ್‌ ಪೊಟ್ಟಣದಲ್ಲಿ ’ಉಬ್ಬಿದ ಚಿಪ್’ ಶೋಧಿಸಿದ ಬಾಲಕಿಗೆ 14 ಲಕ್ಷ ರೂ. ಬಹುಮಾನ

ವಿಡಿಯೋ ಗೇಮ್ ಪಾತ್ರವೊಂದರ ಹಾಗೆ ಕಾಣುವ ಚಿಕನ್ ನಗೆಟ್‌‌ ಒಂದನ್ನು ಕಳೆದ ಜೂನ್‌ನಲ್ಲಿ ಆನ್ಲೈನ್‌ನಲ್ಲಿ $100,000ಗೆ ಮಾರಾಟ ಮಾಡಿದ್ದ ಮ್ಯಾಕ್‌ ಡೊನಾಲ್ಡ್ಸ್‌, ಈ ಮೂಲಕ ಭಾರೀ ಸದ್ದು ಮಾಡಿತ್ತು.

’ಅಮಾಂಗ್ ಅಸ್’ ಗೇಮ್‌‌ನ ಪಾತ್ರವೊಂದರ ಹಾಗೆ ಇದ್ದ ಈ ಮಾಂಸದ ತುಂಡು ಭಾರೀ ಸುದ್ದಿಯಲ್ಲಿತ್ತು.’ಪೊಲ್ಝಿನಾ’ ಹೆಸರಿನ ಇ-ಬೇ ಬಳಕೆದಾರರೊಬ್ಬರು ಪಟ್ಟಿ ಮಾಡಿದ ಮೇಲೆ, 184 ಬಿಡ್‌ಗಳನ್ನು ಪಡೆದ ಈ ತಿಂಡಿಯನ್ನು $99,997ಗೆ ಹರಾಜಾಗಿತ್ತು.

ಇದೀಗ 13 ವರ್ಷದ ಬಾಲೆಯೊಬ್ಬಳು ಪತ್ತೆ ಮಾಡಿದ ಮತ್ತೊಂದು ಜನಪ್ರಿಯ ಕುರುಕಲು ತಿಂಡಿಯೊಂದು ಭಾರೀ ಮೊತ್ತಕ್ಕೆ ಬಿಕರಿಯಾಗಿದೆ.

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ ನಿವಾಸಿಯಾದ ರೈಲೀ ಸ್ಟುವರ್ಟ್‌ಗೆ ’ಡೊರಿಟೋಸ್’ ಬ್ರಾಂಡ್‌ನ ಚಿಪ್ಸ್‌ ಪೊಟ್ಟಣವೊಂದರಲ್ಲಿ ಉಬ್ಬಿಕೊಂಡಂತೆ ಕಾಣುವ ಚಿಪ್ ಒಂದು ಕಂಡಿದ್ದು, ಅದನ್ನಾಕೆ ವಿಡಿಯೋ ಮಾಡಿ ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಿದ್ದರು. ಇದು ಡೊರಿಟಾಸ್‌ನ ಗಮನ ಸೆಳೆದಿದೆ.

ನಿಸರ್ಗ ಸೌಂದರ್ಯ ಸವಿಯಲು ರೈಲ್ವೆ ಇಲಾಖೆಯಿಂದ ಟೂರ್ ಪ್ಯಾಕೇಜ್

ಮ್ಯಾಕ್‌ಡೊನಾಲ್ಡ್ಸ್‌ ನಗೆಟ್‌ಗೆ ಮಾಡಿದ ಹಾಗೆಯೇ ರೈಲೀ ಸಹ ಈ ಅಸಹಜ ಗಾತ್ರದ ಚಿಪ್‌ ಅನ್ನು ಇಬೇನಲ್ಲಿ ಹರಾಜಿನ ಪಟ್ಟಿಗೆ ಸೇರಿಸಿದ್ದಾಳೆ. ಖುದ್ದು ಆಕೆಗೇ ಅಚ್ಚರಿಯಾಗುವ ನಡೆಯೊಂದರಲ್ಲಿ ಹರಾಜಿನ ಮೊತ್ತವು $20,100ರಷ್ಟು (14 ಲಕ್ಷ ರೂಪಾಯಿ) ಜೋರಾಗಿ ಬೆಳೆದಿದೆ.

ಇದೀಗ ಈ ಚಿಪ್‌ ಡೊರಿಟಾಸ್ ಪ್ರಧಾನ ಕಚೇರಿ ತಲುಪಿದ್ದು, ಅದನ್ನು ಶೋಧಿಸಿದ ಬಾಲೆಗೆ ಬಹುಮಾನ ನೀಡಲು ಕಂಪನಿ ನಿರ್ಧರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...