alex Certify ಸ್ಕೇಟಿಂಗ್​ನಲ್ಲಿ ಸಾಹಸ ಮಾಡಲು ಹೋಗಿ ಬೈಕ್ ಸವಾರನ ಪ್ರಾಣಕ್ಕೇ ಕುತ್ತು ತಂದ ಆಟಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕೇಟಿಂಗ್​ನಲ್ಲಿ ಸಾಹಸ ಮಾಡಲು ಹೋಗಿ ಬೈಕ್ ಸವಾರನ ಪ್ರಾಣಕ್ಕೇ ಕುತ್ತು ತಂದ ಆಟಗಾರ

ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಅನುಸರಿಸುವ ಬಗ್ಗೆ ಸಾಕಷ್ಟು ಹೇಳಲಾಗಿದೆ ಮತ್ತು ತಿಳಿಸಲಾಗುತ್ತದೆ. ಇದರ ಹೊರತಾಗಿಯೂ ಕೆಲವರು ಹೆಚ್ಚು ಹೆಚ್ಚು ಲೈಕ್ಸ್​ ಪಡೆಯಲು ಹುಚ್ಚು ಸಾಹಸಕ್ಕೆ ಮುಂದಾಗಿ ತಮ್ಮ ಜೀವವನ್ನು ಮಾತ್ರವಲ್ಲದೇ ಅಮಾಯಕರ ಜೀವವನ್ನೂ ತೆಗೆಯುತ್ತಿರುವ ನಿದರ್ಶನಗಳಿವೆ.
ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ರಸ್ತೆಯ ಮೇಲೆ ಸ್ಕೇಟ್‌ಬೋರ್ಡ್ ಆಡುತ್ತಿರುವ ಯುವಕನ ವಿಡಿಯೋ ಇದಾಗಿದೆ. ಈತ ಅತಿ ವೇಗದಲ್ಲಿ ಸ್ಕೇಟಿಂಗ್​ನಲ್ಲಿ ಸವಾರಿ ಮಾಡುತ್ತಿರುವುದನ್ನು ನೋಡಬಹುದು. ಆರಂಭದಲ್ಲಿ ಈತ ಎದುರಿಗೆ ಬರುವ ವಾಹನ, ಬೈಕ್​ಗಳನ್ನು ತಪ್ಪಿಸಿಕೊಂಡು ರಸ್ತೆಯ ಮೇಲೆ ವೇಗದಲ್ಲಿ ಸವಾರಿ ಮಾಡಲು ಯಶಸ್ವಿಯಾಗುತ್ತಾನೆ. ಮೊದಲಿಗೆ ಎದುರಿಗಿನಿಂದ ಬಂದ ಟ್ರಕ್, ನಂತರ ಇನ್ನೊಂದು ಬೈಕ್​ ಎಲ್ಲವನ್ನೂ ತಪ್ಪಿಸಿಕೊಂಡು ಹೋಗುತ್ತಾನೆ.

ಇದಾದ ಬಳಿಕ ಇನ್ನೊಂದು ಬೈಕ್​ ಸವಾರ ತನ್ನ ಬೈಕ್​ನಲ್ಲಿ ಭಾರಿ ಸಾಮಾನು ಹೊತ್ತು ಬರುತ್ತಿರುವಾಗ ಈ ಸ್ಕೇಟರ್​ ಎದುರಿಗಿರುವ ಬೈಕ್ಗು ಗುದ್ದುತ್ತಾನೆ. ನಿಯಂತ್ರಣ ಕಳೆದುಕೊಂಡು ಬೈಕ್​ ಸವಾರ ಬೀಳುತ್ತಾನೆ. ಸ್ಕೇಟಿಂಗ್‌ಗಾಗಿ ತಪ್ಪು ರಸ್ತೆಯನ್ನು ಆರಿಸಿಕೊಂಡದ್ದೂ ಅಲ್ಲದೇ ಬೈಕ್​ ಸವಾರನ ಪ್ರಾಣಕ್ಕೆ ಸಂಚಕಾರ ತಂದಿದ್ದಾನೆ. ವಿಡಿಯೋ ನೋಡಿದರೆ ಇಬ್ಬರಿಗೂ ಗಂಭೀರ ಗಾಯಗಳಾಗಿವೆ ಎಂಬುದು ತೋರುತ್ತದೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...