alex Certify ಅಬ್ಬಬ್ಬಾ…..! ಸ್ಪೈಡರ್‌ ಮ್ಯಾನ್ ಕಾಮಿಕ್ಸ್‌ನ ಒಂದೇ ಒಂದು ಪುಟ ಬರೋಬ್ಬರಿ 24 ಕೋಟಿ ರೂ.ಗೆ ಹರಾಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…..! ಸ್ಪೈಡರ್‌ ಮ್ಯಾನ್ ಕಾಮಿಕ್ಸ್‌ನ ಒಂದೇ ಒಂದು ಪುಟ ಬರೋಬ್ಬರಿ 24 ಕೋಟಿ ರೂ.ಗೆ ಹರಾಜು

ಸ್ಪೈಡರ್‌-ಮ್ಯಾನ್ ಕಾಮಿಕ್ಸ್‌ನ ಒಂದೇ ಒಂದು ಪುಟದ ಕಲಾಕೃತಿಯೊಂದು ದಾಖಲೆಯ $3.36 ದಶಲಕ್ಷಕ್ಕೆ ಹರಾಜಾಗಿದೆ. 1984ರ ಕಾಲಘಟ್ಟದ ಮಾರ್ಚೆಲ್ ಕಾಮಿಕ್ಸ್‌ ಸೀಕ್ರೆಟ್ ವಾರ್ಸ್ ನಂ8 ಕಾಮಿಕ್ ಪುಸ್ತಕದ 25ನೇ ಪುಟಕ್ಕೆ ಮೈಕ್ ಜ಼ೆಕ್‌ರ ಕಲೆಯಲ್ಲಿ, ಕಪ್ಪು ಸೂಟ್‌ನಲ್ಲಿ ಸ್ಪೈಡರ್‌-ಮ್ಯಾನ್ ಕಾಣಿಸಿಕೊಂಡಿದ್ದಾನೆ. ಈ ಸಿಂಬಯೋಟ್ ಸೂಟ್‌ನಿಂದಲೇ ಮುಂದೆ ವೆನಮ್ ಪಾತ್ರ ಹುಟ್ಟಿಕೊಂಡಿದೆ.

ಡಲ್ಲಾಸ್‌ನಲ್ಲಿ ಹೆರಿಟೇಜ್ ಆಕ್ಷನ್ಸ್‌ನಿಂದ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಕಾಮಿಕ್ ಇವೆಂಟ್ ಒಂದರಲ್ಲಿ $330,00 ರಲ್ಲಿ ಶುರುವಾದ ಬಿಡ್ಡಿಂಗ್ ಪ್ರಕ್ರಿಯೆ ಮೂರು ದಶಲಕ್ಷ ಡಾಲರ್‌ ದಾಟಿ ಸಾಗಿದೆ.

ಈ ಹಿಂದೆ ಅಮೆರಿಕದ ಕಾಮಿಕ್ ಪುಸ್ತಕದ ಒಂದೇ ಒಂದು ಪುಟ ದೊಡ್ಡ ಮೊತ್ತಕ್ಕೆ ಹರಾಜಾದ ಘಟನೆ 1974ರಲ್ಲಿ ಜರುಗಿತ್ತು. ವಾಲ್ವರೈನ್‌ನ ಮೊದಲ ಪರಿಚಯ ಕೊಟ್ಟ ’ದಿ ಇಂಕ್ರೆಡಿಬಲ್ ಹಲ್ಕ್‌’ ಪುಸ್ತಕದ ಪುಟವು ಹೀಗೆ ದೊಡ್ಡ ಮೊತ್ತಕ್ಕೆ ಹರಾಜಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...