alex Certify ವಸತಿ ಪ್ರದೇಶ ಬಂದಾಗ ಮಂಜಾಗುವ ರೈಲಿನ ಕಿಟಕಿ…! ತಂತ್ರಜ್ಞಾನಕ್ಕೆ ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಸತಿ ಪ್ರದೇಶ ಬಂದಾಗ ಮಂಜಾಗುವ ರೈಲಿನ ಕಿಟಕಿ…! ತಂತ್ರಜ್ಞಾನಕ್ಕೆ ಬೆರಗಾದ ನೆಟ್ಟಿಗರು

ಸಿಂಗಾಪುರದ ರೈಲು ವಸತಿ ಬ್ಲಾಕ್‌ಗಳ ಮೂಲಕ ಹಾದು ಹೋಗುವಾಗ ಸ್ವಯಂಚಾಲಿತವಾಗಿ ಅದರ ಕಿಟಕಿಗಳು ಬ್ಲರ್​ ಆಗುವ ವಿಶಿಷ್ಟ ತಂತ್ರಜ್ಞಾನ ರೂಪಿಸಲಾಗಿದೆ. ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ ಕಾರಣ ಮನೆಗಳ ಜನರ ಖಾಸಗಿತನಕ್ಕೆ ಧಕ್ಕೆ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ.

ರೈಲು ಸಿಂಗಾಪುರದ ಬುಕಿಟ್ ಪಂಜಾಂಗ್ ಲೈಟ್ ರೈಲ್ ಟ್ರಾನ್ಸಿಟ್ (LRT) ಎಂದು ಕರೆಯಲಾಗುತ್ತದೆ. ಇದು ದೇಶದ ಮೊದಲ ಲಘು ರೈಲು, ಈ ತಂತ್ರಜ್ಞಾನ ನೆಟ್ಟಿಗರ ಮನ ಗೆದ್ದಿದೆ. ಎಲ್‌ಆರ್‌ಟಿ ಮಾರ್ಗದ ಪಕ್ಕದಲ್ಲಿ ವಾಸಿಸುವ ನಾಗರಿಕರ ಗೌಪ್ಯತೆಯನ್ನು ರಕ್ಷಿಸಲು ರೈಲಿನ ನವೀನ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ.

ಆದ್ದರಿಂದ, ಸಾರ್ವಜನಿಕ ಸಾರಿಗೆ ವಾಹನವು ವಸತಿ ಕಟ್ಟಡದ ಹತ್ತಿರ ಬಂದಾಗ, ಅದರ ಕಿಟಕಿಗಳು ಸ್ವಯಂಚಾಲಿತವಾಗಿ ಬ್ಲರ್​ ಆಗಿ ಹೊರಗಡೆಯ ವಸ್ತುಗಳು ಕಾಣಿಸುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಟ್ವಿಟ್ಟರ್‌ನಲ್ಲಿ ವೈರಲ್ ಆಗಿರುವ ವಾಹನದಲ್ಲಿ ಇದನ್ನು ಸ್ಪಷ್ಟವಾಗಿ ನೋಡಬಹುದು. ಸಿಂಗಪುರದ ತಂತ್ರಜ್ಞಾನಕ್ಕೆ ಸಿಂಗಪುರವೇ ಸಾಟಿ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...