alex Certify ಧಾರಾವಾಹಿಯ ಈ ದೃಶ್ಯ ನೋಡಿ ಬಿದ್ದು ಬಿದ್ದು ನಗ್ತಿದ್ದಾರೆ ಜನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಾರಾವಾಹಿಯ ಈ ದೃಶ್ಯ ನೋಡಿ ಬಿದ್ದು ಬಿದ್ದು ನಗ್ತಿದ್ದಾರೆ ಜನ….!

ಹಲವಾರು ಮಂದಿ ಧಾರಾವಾಹಿ, ವೆಬ್ ಸಿರೀಸ್ ಮುಂತಾದವುಗಳನ್ನು ಬಹಳ ಇಷ್ಟಪಟ್ಟು ನೋಡ್ತಾರೆ. ಅದ್ರಲ್ಲಿ ಕೆಲವು ಧಾರಾವಾಹಿಗಳ ಸೀನ್ ಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೋಲ್ ಆಗುತ್ತಿರುತ್ತವೆ. ಹಾಗೆ ಈ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ.

ಕಲರ್ಸ್ ಟಿವಿ ಹಿಂದಿ ಭಾಷೆಯ ಇತ್ತೀಚೆಗಿನ ಥಾಪ್ಕಿ ಪ್ಯಾರ್ ಕಿ ಚಿತ್ರದ ಸಿಂಧೂರ್ ದೃಶ್ಯ ವೈರಲ್ ಆಗಿದೆ. ಇದು ಭೌತಶಾಸ್ತ್ರದ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ದೃಶ್ಯದಲ್ಲಿ ಥಾಪ್ಕಿ ಎಂಬಾಕೆ ಸ್ನಾನ ಮಾಡಿ ಬಂದ ನಂತರ ಕನ್ನಡಿ ಮುಂದೆ ನಿಂತಿದ್ದಾಳೆ. ಈ ವೇಳೆ ಅಲ್ಲಿ ಬಂದ ಆಕೆಯ ಪತಿ ಪುರಬ್ ನೆಲದ ಮೇಲೆ ಚೆಲ್ಲಿದ್ದ ನೀರಿಗೆ ಕಾಲಿಟ್ಟ ಪರಿಣಾಮ ಜಾರಿ ಥಾಪ್ಕಿ ಮೇಲೆ ಬಿದ್ದಿದ್ದಾನೆ. ಈ ವೇಳೆ ಈತನ ಕೈ ಬೆರಳು ಸಿಂಧೂರಕ್ಕೆ ತಾಗಿ ಥಾಪ್ಕಿಯ ಹಣೆಗೆ ಹಚ್ಚಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಸಖತ್ ಟ್ರೋಲ್ ಮಾಡಿದ್ದಾರೆ. ಈ ಲಾಜಿಕ್ ಗೆ ನೆಟ್ಟಿಗರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅಲ್ಲದೆ, ಈ ವಿಡಿಯೋ ನೋಡಿ ಆಶ್ಚರ್ಯದಿಂದ ನ್ಯೂಟನ್ ಸಮಾಧಿಯಿಂದ ಎದ್ದು ಬಂದಿದ್ದಾನೆ ಎಂದೆಲ್ಲಾ ನೆಟ್ಟಿಗರು ತಮಾಷೆ ಮಾಡಿದ್ದಾರೆ.

— ColorsTV (@ColorsTV) October 29, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...