alex Certify ಫೆ.27ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆ.27ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ

shukra gochar venus transit 2022 positive and good effect on zodiacs |  शुक्र देव 27 फरवरी से चमकाएंगे इन राशियों की किस्मत, धन लाभ का बन रहा है  प्रबल योग | Hindi News, धर्म

ಶುಕ್ರನಿದ್ದಲ್ಲಿ ಸಂತೋಷ, ಸಮೃದ್ಧಿ ನೆಲೆಸಿರುತ್ತದೆ ಎಂದು ನಂಬಲಾಗಿದೆ. ಶುಕ್ರನ ಶುಭ ಪ್ರಭಾವದಿಂದ ಸಂಪತ್ತು, ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಶುಕ್ರನ ಪ್ರಭಾವದಿಂದ ವ್ಯಕ್ತಿಯ ಭಾಗ್ಯದ ಬಾಗಿಲು ತೆರೆಯುತ್ತದೆ. ಶುಕ್ರನ ಕೃಪೆಯಿರುವ ಜಾತಕದವರು ತಾಯಿ ಲಕ್ಷ್ಮಿಯ ವಿಶೇಷ ಕೃಪೆಗೆ ಪಾತ್ರರಾಗುತ್ತಾರೆ. ಫೆಬ್ರವರಿ 27 ರಂದು ಶುಕ್ರನು ತನ್ನ ರಾಶಿ ಬದಲಿಸುತ್ತಿದ್ದಾನೆ. ಈತನ ರಾಶಿ ಬದಲಾವಣೆಯಿಂದ ಕೆಲ ರಾಶಿಯವರ ಅದೃಷ್ಟ ಬದಲಾಗಲಿದೆ.

ಶುಕ್ರನ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ಮಂಗಳಕರವಾಗಲಿದೆ. ಆರ್ಥಿಕ ಲಾಭವಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಏಳ್ಗೆಯಾಗಲಿದೆ. ವೈವಾಹಿಕ ಜೀವನದ ಸಂಪೂರ್ಣ ಆನಂದ ಸಿಗಲಿದೆ. ಆದ್ರೆ ಈ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.

ವೃಷಭ ರಾಶಿಯವರಿಗೆ ಶುಕ್ರನ ಬದಲಾವಣೆಯು ತುಂಬಾ ಶುಭಕರವಾಗಲಿದೆ. ಮಾಡುವ ಎಲ್ಲ ಕೆಲಸಗಳು ಶುಭ ಫಲಿತಾಂಶ ನೀಡಲಿದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಪ್ರಾಪ್ತಿಯಾಗಲಿದೆ. ದಾಂಪತ್ಯ ಜೀವನದಲ್ಲಿ ಸುಖ ಪ್ರಾಪ್ತಿಯಾಗಲಿದೆ.

ಶುಕ್ರನ ರಾಶಿ ಬದಲಾವಣೆಯಿಂದ ಲಾಭವಾಗುವ ಇನ್ನೊಂದು ರಾಶಿ ಕರ್ಕ. ಈ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭವಾಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.  ಮನೆ ಮತ್ತು ವಾಹನದ ಆಸೆ ಈಡೇರಲಿದೆ.

ಶುಕ್ರನ ರಾಶಿ ಬದಲಾವಣೆಯು ಕನ್ಯಾ ರಾಶಿಯವರಿಗೆ ಶುಭ ತರಲಿದೆ. ಅವಿವಾಹಿತರ ಇಷ್ಟಾರ್ಥಗಳು ಈಡೇರಲಿವೆ. ಕುಟುಂಬದಲ್ಲಿ ಸಂತಸ ಮನೆ ಮಾಡಲಿದೆ. ಉದ್ಯೋಗದಲ್ಲಿ ಆದಾಯದ ಹೆಚ್ಚಳವಾಗಲಿದೆ. ಆದ್ರೆ ದುಂದುವೆಚ್ಚವನ್ನು ತಪ್ಪಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...